ಹವಾಮಾನಕ್ಕೆ ಅನುಗುಣವಾಗಿ ನಾವು ಉಡುಪುಗಳನ್ನು ಬದಲಾಯಿಸುತ್ತೇವೆ. ಅದೇ ರೀತಿ ಪಾದರಕ್ಷೆಗಳನ್ನೂ ಬದಲಾಯಿಸುವುದು ಬಹಳ ಮುಖ್ಯ. ಚಳಿಗಾಲದಲ್ಲಿ ಬೂಟುಗಳನ್ನು ಧರಿಸುವುದು ಸೂಕ್ತ. ಚಳಿಯಿಂದ ಬೆಚ್ಚಗಿಡುವುದರ ಜೊತೆಗೆ ಪಾದಗಳಿಗೂ ಆರಾಮದಾಯಕವಾಗಿರುತ್ತದೆ. ಆದರೆ ಬೇಸಿಗೆಯಲ್ಲಿ ಪಾದಗಳನ್ನು ತಂಪಾಗಿ ಇಡಬಲ್ಲ ಪಾದರಕ್ಷೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
ಬೇಸಿಗೆಯಲ್ಲಿ ಬೂಟುಗಳಿಗಿಂತ ಸ್ಯಾಂಡಲ್ ಹೆಚ್ಚು ಆರಾಮದಾಯಕವಾಗಿರುತ್ತದೆ. ಪ್ರತಿ ಉಡುಪಿಗೂ ಮ್ಯಾಚ್ ಆಗಬಲ್ಲ ಪಾದರಕ್ಷೆ ಇದು. ಸಮ್ಮರ್ನಲ್ಲಿ ಸ್ಯಾಂಡಲ್ಸ್ ಖರೀದಿ ಮಾಡುವ ಮುನ್ನ ಕೆಲವೊಂದು ವಿಚಾರಗಳನ್ನು ಗಮನದಲ್ಲಿಡಿ.
ಸ್ಯಾಂಡಲ್ಸ್ ಕೊಂಡುಕೊಳ್ಳುವಾಗ ನಿಮ್ಮ ಶೈಲಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಬೇಸಿಗೆಯಲ್ಲಿ ಸ್ಲೈಡ್ರ್ಗಳು ಸಹ ಚೆನ್ನಾಗಿರುತ್ತವೆ. ನೀವು ಸ್ಟೈಲಿಶ್ ಆಗಿ ಏನನ್ನಾದರೂ ಧರಿಸಲು ಬಯಸಿದರೆ ಶೂಸ್ ಕೂಡ ಕೊಂಡುಕೊಳ್ಳಬಹುದು. ಮೊದಲೇ ಯಾವ ಬಗೆಯ ಪಾದರಕ್ಕೆ ಕೊಳ್ಳಬೇಕೆಂದು ನಿರ್ಧರಿಸಿಕೊಂಡು ಹೋದರೆ ಗೊಂದಲ ಇರುವುದಿಲ್ಲ.
ಯಾವುದೇ ಪಾದರಕ್ಷೆಗಳನ್ನು ಆಯ್ಕೆಮಾಡುವಾಗ ಆರಾಮವನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ನೀವು ಚಪ್ಪಲಿಗಳನ್ನು ಖರೀದಿಸಲು ಹೋದಾಗ ಪಾದಕ್ಕೆ ಆರಾಮವೆನಿಸುವುದನ್ನು ಆಯ್ಕೆ ಮಾಡಿ. ಆಗ ಮಾತ್ರ ನೀವು ಸುಲಭವಾಗಿ ನಡೆಯಲು ಸಾಧ್ಯವಾಗುತ್ತದೆ. ನೀವು ಹೈಹೀಲ್ಡ್ ಚಪ್ಪಲಿಗಳನ್ನು ತೆಗೆದುಕೊಂಡರೆ ನಡೆಯುವುದೇ ಕಷ್ಟವಾಗುತ್ತದೆ.
ಪಾದಗಳು ನೋವಾಗಬಹುದು. ಪಾದರಕ್ಷೆಗಳನ್ನು ಖರೀದಿಸುವ ಮುನ್ನ ಅದರ ಗುಣಮಟ್ಟವನ್ನು ಪರೀಕ್ಷಿಸಿಕೊಳ್ಳಿ. ಪಾದಕ್ಕೆ ಚುಚ್ಚುವಂತಹ ಚಪ್ಪಲಿಯನ್ನು ಕೊಳ್ಳಬೇಡಿ. ಯಾವಾಗಲೂ ಉತ್ತಮ ಬ್ರಾಂಡ್ ಮತ್ತು ಉತ್ತಮ ಗುಣಮಟ್ಟದ ಸ್ಯಾಂಡಲ್ಗಳನ್ನು ಆಯ್ಕೆ ಮಾಡಿ.