ಅತಿಯಾದ ಸೌಂದರ್ಯಪ್ರಜ್ಞೆಯಿಂದ ಸೌಂದರ್ಯ ಸಾಧನಗಳ ಮೊರೆ ಹೋಗುವ ಮಹಿಳೆಯರೇ ಎಚ್ಚರ, ಈ ಉತ್ಪನ್ನಗಳು ನಿಮ್ಮ ಹಾರ್ಮೋನ್‌ಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.
ವ್ಯಾಪಕವಾಗಿ ಬಳಕೆಯಾಗುವ ಕಾಸ್ಮೆಟಿಕ್ ಹಾಗೂ ವೈಯಕ್ತಿಕ ಆರೈಕೆ ಉತ್ಪನ್ನಗಳಲ್ಲಿನ ರಾಸಾಯನಿಕಗಳು ಹಾಗೂ ಸಂತಾನೋತ್ಪತ್ತಿ ಹಾರ್ಮೋನ್‌ಗಳ ಬದಲಾವಣೆಯ ನಡುವೆ ಸಂಬಂಧ ಇದೆ ಎಂಬುದಾಗಿ ಅಧ್ಯಯನವೊಂದು ಪತ್ತೆ ಮಾಡಿದೆ.
ಈ ಸೌಂದರ್ಯ ಸಾಧನಗಳಲ್ಲಿನ ನಿರ್ದಿಷ್ಟ ರಾಸಾಯನಿಕಗಳ ಮಿಶ್ರಣ ಹಾಗೂ ಯುವಿ ಫಿಲ್ಟರ್‌ಗಳು ಸಂತಾನೋತ್ಪತ್ತಿ ಹಾರ್ಮೋನ್‌ಗಳ ಇಳಿಕೆಗೆ ಸಂಬಂಧಿಸಿವೆ. ಉಳಿದ ರಾಸಾಯನಿಕಗಳು ಸಂತಾನೋತ್ಪತ್ತಿ ಹಾರ್ಮೋನ್‌ಗಳ ಏರಿಕೆಗೆ ಸಂಬಂಧಿಸಿವೆ ಎಂಬುದಾಗಿ ಅಧ್ಯಯನದಲ್ಲಿ ಕಂಡುಬಂದಿದೆ.
ಸೌಂದರ್ಯ ಸಾಧನಗಳ ಬಗ್ಗೆ ನಾವು ಎಚ್ಚರ ಹೊಂದಿರಬೇಕು. ಪ್ಯಾರಾಬೀನ್‌ನಂತಹ ರಾಸಾಯನಿಕ ಈಸ್ಟ್ರೋಜನ್ ಮಟ್ಟವನ್ನು ಹೆಚ್ಚಿಸಬಹುದು. ಕ್ಯಾನ್ಸರ್‌ನಂತಹ ಅಪಾಯದ ಸಾಧ್ಯತೆಯ ಕುರಿತು ಇನ್ನಷ್ಟು ಸಂಶೋಧನೆ ಅಗತ್ಯವಿದೆ.