alex Certify ಮಹಿಳೆಯರ ಆರೋಗ್ಯ ಸುಸ್ಥಿತಿಯಲ್ಲಿಡಲು ಸಹಾಯಕ ಕಾಲಿಫ್ಲವರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರ ಆರೋಗ್ಯ ಸುಸ್ಥಿತಿಯಲ್ಲಿಡಲು ಸಹಾಯಕ ಕಾಲಿಫ್ಲವರ್

ಹೂಕೋಸು ಸೇವನೆಯಿಂದ ದೊರಕುವ ಆರೋಗ್ಯ ಪ್ರಯೋಜನಗಳು ಅಷ್ಟಿಷ್ಟಲ್ಲ. ಹೂಕೋಸಿನಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಸೊನ್ನೆ ಎಂದೇ ಹೇಳಬಹುದು.

ಆದ್ದರಿಂದ ಹೃದಯದ ಕಾಯಿಲೆ ಇರುವವರು ನಿರ್ಭಯವಾಗಿ ಇದನ್ನು ತಿನ್ನಬಹುದು. ಸಾಮಾನ್ಯವಾಗಿ ಎಲ್ಲಾ ಬಗೆಯ ಹೃದಯದ ಕಾಯಿಲೆಗಳನ್ನು ಸಮರ್ಥವಾಗಿ ದೂರಮಾಡುತ್ತದೆ. ಹೂಕೋಸಿನಿಂದ ನಮಗೆ ಲಭ್ಯವಾಗುವ ಆರೋಗ್ಯಕರ ಉಪಯೋಗಗಳು ಸಾಕಷ್ಟಿವೆ.

* ಮಹಿಳೆಯರ ಆರೋಗ್ಯ ಸುಸ್ಥಿತಿಯಲ್ಲಿಡಲು ಕಾಲಿಫ್ಲವರ್ ಹೆಚ್ಚು ಸಹಾಯಕಾರಿ. ಯಾಕೆಂದರೆ ಇದು ಹಾರ್ಮೋನ್ ಅನ್ನು ಸಮತೋಲನದಲ್ಲಿಡುತ್ತದೆ.

* ಹೂಕೋಸು ಅಲರ್ಜಿಗೆ ದಿವ್ಯೌಷಧ. ಇದು ಅನೇಕ ರೀತಿಯ ಅಲರ್ಜಿ ಗಳೊಂದಿಗೆ ನೆಗಡಿಯನ್ನು ಸಹ ಸಮರ್ಥವಾಗಿ ಕಡಿಮೆ ಮಾಡುತ್ತದೆ.

* ಕಾಲಿಫ್ಲವರ್ ನಲ್ಲಿ ಇಂಡೋಲ್ 3 ಕಾರ್ಬಿನಾಲ್ ಎಂಬ ಜೈವಿಕ ರಾಸಾಯನಿಕ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಪ್ರಾಸ್ಟೇಟ್, ದೊಡ್ಡಕರುಳು, ಸ್ತನ ಕ್ಯಾನ್ಸರ್ ಗಳನ್ನು ಸಮರ್ಥವಾಗಿ ನಿವಾರಿಸುತ್ತದೆ.

* ಕಾಲಿಫ್ಲವರ್ ಗಾಯ, ಏಟುಗಳಿಂದ ಉಂಟಾಗುವ ಊತ, ನೋವು, ಉರಿಯನ್ನು ಕಡಿಮೆ ಮಾಡುತ್ತದೆ.

* ಕಾಲಿಫ್ಲವರ್ ಉತ್ತಮ ಡಿಟಾಕ್ಸಿ ಫೈಯಿಂಗ್ ಏಜೆಂಟ್. ಇದು ದೇಹದಲ್ಲಿ ಸೇರ್ಪಡೆಯಾಗಿರುವ ವಿಷಗಳು, ವ್ಯರ್ಥಗಳನ್ನು ಸಮರ್ಥವಾಗಿ ಹೊರಹಾಕುತ್ತದೆ.

* ಅಷ್ಟೇ ಅಲ್ಲದೆ ಕಣ್ಣಿನ ಕಾಯಿಲೆಗಳನ್ನು ನಿವಾರಿಸುತ್ತದೆ. ಕಾಲಿಫ್ಲವರ್ ಸೇವಿಸುವುದರಿಂದ ದೃಷ್ಟಿಯು ದೀರ್ಘಕಾಲ ತೀಕ್ಷ್ಣವಾಗಿರುತ್ತದೆ.

* ಡಯಾಬಿಟೀಸ್, ಪಾರ್ಶ್ವವಾಯು, ಮೆದುಳಿಗೆ ಸಂಬಂಧಪಟ್ಟ ಕಾಯಿಲೆಗಳನ್ನು ಕಾಲಿಫ್ಲವರ್ ಸಮರ್ಥವಾಗಿ ನಿವಾರಿಸುತ್ತದೆ.

* ದೇಹದ ತೂಕವನ್ನು ಆರೋಗ್ಯಕರವಾದ ಕ್ರಮದಲ್ಲಿ ಕಡಿಮೆ ಮಾಡಿಕೊಳ್ಳುವುದಕ್ಕೂ, ಸ್ಥೂಲಕಾಯವನ್ನು ನಿವಾರಿಸಿಕೊಳ್ಳುವುದಕ್ಕೂ ಇದು ಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...