ಅನೇಕರು ತಮ್ಮ ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಮನಿ ಪ್ಲಾಂಟ್ ಇಟ್ಟಿರುತ್ತಾರೆ. ಮನಿ ಪ್ಲಾಂಟ್ ಇಡುವುದು ಉತ್ತಮ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಇಡಬೇಕು. ಆಗ ಮಾತ್ರ ಅದ್ರ ಲಾಭ ಸಿಗಲು ಸಾಧ್ಯ.
ಮನೆ ಒಳಗೆ ಮಾತ್ರ ಮನಿ ಪ್ಲಾಂಟ್ ಇಡಬೇಕು. ಹಾಗೆ ಮನೆಯ ಉತ್ತರ ದಿಕ್ಕಿಗೆ ಮನಿ ಪ್ಲಾಂಟ್ ಇಡಬೇಕು.
ಮನೆಯಲ್ಲಿ ಎಲ್ಲರೂ ಓಡಾಡುವ ಜಾಗದಲ್ಲಿ ಮನಿ ಪ್ಲಾಂಟ್ ಇಡಬಾರದು. ಮನಿ ಪ್ಲಾಂಟ್ ಮೇಲೆ ಕೆಟ್ಟ ದೃಷ್ಟಿ ಬಿದ್ರೆ ಅದು ಪರಿಣಾಮ ಬೀರುವುದಿಲ್ಲ.
ಮನಿ ಪ್ಲಾಂಟನ್ನು ಮನೆಯ ಬಾಗಿಲಿನಲ್ಲಿ ಇಡಬಾರದು. ಇದ್ರಿಂದ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ. ಇದು ಮನೆಯವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಮನಿ ಪ್ಲಾಂಟನ್ನು ಒಣಗಲು ಬಿಡಬಾರದು. ಒಣಗಿದ ಗಿಡವನ್ನು ಮನೆಯಲ್ಲಿ ಇಡಬಾರದು. ಮನಿ ಪ್ಲಾಂಟ್ ಎಲೆಗಳು ನೆಲದ ಮೇಲೆ ಬೀಳದಂತೆ ನೋಡಿಕೊಳ್ಳಬೇಕು.