ಇವೆರಡೇ ವಸ್ತುಗಳು ಸಾಕು…..! ಫಟಾ ಫಟ್‌ ಇಳಿಯುತ್ತೆ ತೂಕ

ಭಾರತದಲ್ಲಿ ಸ್ಥೂಲಕಾಯದ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕೆಲವರಿಗೆ ಬಯಸಿದ್ರೂ ಜಿಮ್‌ಗೆ ಸೇರಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವರಿಗೆ ವ್ಯಾಯಾಮ ಮಾಡಲು ಸೋಮಾರಿತನ. ಇನ್ನೊಂದಷ್ಟು ಮಂದಿಗೆ ಸಮಯದ ಕೊರತೆ ಇರಬಹುದು. ಹೀಗೆ ನಾನಾ ಕಾರಣಗಳಿಂದಾಗಿ ತೂಕ ಇಳಿಸಿಕೊಳ್ಳುವುದೇ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.

ಬೊಜ್ಜಿನ ಸಮಸ್ಯೆ ಇರುವವರು ಮೊದಲು ಹೋಟೆಲ್‌, ರೆಸ್ಟೋರೆಂಟ್‌ ಅಥವಾ ರಸ್ತೆ ಪಕ್ಕದ ಚಾಟ್‌ ಸೆಂಟರ್‌ಗಳಲ್ಲಿ ಜಂಕ್‌ ಫುಡ್‌ ತಿನ್ನುವುದನ್ನು ನಿಲ್ಲಿಸಬೇಕು. ಮನೆಯಲ್ಲೇ ಫ್ರೆಶ್‌ ಆಗಿ ಮಾಡಿಕೊಂಡು ಊಟ ಮಾಡುವುದು ಸೂಕ್ತ. ತೂಕ ಅತಿಯಾದರೆ ಅಧಿಕ ರಕ್ತದೊತ್ತಡದಿಂದ ಹಿಡಿದು ಹೃದಯಾಘಾತದವರೆಗೆ ಅನೇಕ ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿರುತ್ತದೆ.

ಹಾಗಾಗಿ ಸ್ವಾಭಾವಿಕವಾಗಿಯೇ ತೂಕ ಕಳೆದುಕೊಳ್ಳುವುದು ಹೇಗೆ ಅನ್ನೋದನ್ನು ನೋಡೋಣ. ಶುಂಠಿ ಮತ್ತು ತ್ರಿಫಲ ಈ ಎರಡು ವಸ್ತುಗಳಿಂದ ನೀವು ಅತ್ಯಂತ ವೇಗವಾಗಿ ತೂಕ ಇಳಿಸಬಹುದು. ಆದರೆ ಅವುಗಳನ್ನು ಬಳಕೆ ಮಾಡುವ ಸರಿಯಾದ ವಿಧಾನ ತಿಳಿದುಕೊಳ್ಳಿ. ಶುಂಠಿಯನ್ನು ನೀವು ಚಹಾಕ್ಕೆ ಹಾಕಿಕೊಂಡು ಕುಡಿಯಬಹುದು. ಆದರೆ ತ್ರಿಫಲವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿಕೊಂಡು ಕುಡಿಯಬೇಕು.

ನಿಮ್ಮ ದೇಹವನ್ನು ನಿರ್ವಿಷಗೊಳಿಸುವಲ್ಲಿ ಅಥವಾ ಡಿಟಾಕ್ಸ್‌ ಮಾಡುವಲ್ಲಿ ತ್ರಿಫಲಾ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿವೆ. ಇದು ನಿಮ್ಮ ತೂಕವನ್ನು ಕಡಿಮೆ ಮಾಡುತ್ತದೆ. ಶುಂಠಿ ಸೇವನೆಯಿಂದ ಕೂಡ ನಿಮ್ಮ ತೂಕ ನಿಯಂತ್ರಣಕ್ಕೆ ಬರುತ್ತದೆ. ಅತಿಯಾಗಿ ತಿನ್ನುವುದನ್ನು ತಡೆಯುವ ಉರಿಯೂತದ ಗುಣಲಕ್ಷಣಗಳನ್ನು ಶುಂಠಿ ಹೊಂದಿದೆ.  ಶುಂಠಿ ಉರಿಯೂತವನ್ನು ಸಹ ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಬೇಗನೆ ನೀವು ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read