alex Certify ನದಿ ನೀರಿನ ಸ್ನಾನದಿಂದ ಇದೆ ಇಷ್ಟೆಲ್ಲಾ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನದಿ ನೀರಿನ ಸ್ನಾನದಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಮನುಷ್ಯನ ಮನಸ್ಸು ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ನಿರತವಾಗಿರುತ್ತದೆ. ಈ ನಿಟ್ಟಿನಲ್ಲಿ ಹಲವಾರು ಸಕಾರಾತ್ಮಕ ಇಲ್ಲವೇ ನಕಾರಾತ್ಮಕ ಯೋಚನೆಗಳು ಬರುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಆಲೋಚನೆಯ ವಿಧಾನವನ್ನು ಬದಲಿಸಬೇಕು. ಇದಕ್ಕೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಢತೆ ಇರಲೇಬೇಕು. ಆದ್ದರಿಂದ ಸರಿಯಾದ ಆಹಾರ ಕ್ರಮ, ದೇವರು, ಭಕ್ತಿ ಇವೆಲ್ಲವೂ ಪೂರಕವಾಗಿವೆ. ಈ ನಿಟ್ಟಿನಲ್ಲಿ ನದಿ ನೀರಿನ ಸ್ನಾನ ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಹಾಗಾದರೆ ನದಿ ನೀರಿನ ಸ್ನಾನದಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನ ನೋಡೋಣ ಬನ್ನಿ.

ಶ್ವಾಸಕೋಶದ ಕಾರ್ಯ ಸರಾಗವಾಗುತ್ತದೆ : ಬೆಳಗ್ಗಿನ ಜಾವ ನೀವು ತಣ್ಣೀರಿನಲ್ಲಿ ಮುಳುಗಿ ಎದ್ದಾಗ ಒಂದು ಸೆಕೆಂಡ್ ಉಸಿರುಗಟ್ಟಿದಂತಾಗುತ್ತದೆ. ಆಗ ನೀವು ಉಸಿರಾಡಲು ಪ್ರಯತ್ನಿಸುತ್ತೀರಿ. ಇದರಿಂದ ಶ್ವಾಸಕೋಶದ ಕಾರ್ಯ ಸರಾಗವಾಗುತ್ತದೆ.

BIG BREAKING: ರೆಪೋ ದರ ಹೆಚ್ಚಿಸಿದ RBI; ತಕ್ಷಣದಿಂದಲೇ ಅನ್ವಯ ಎಂದ ಶಕ್ತಿಕಾಂತ್ ದಾಸ್

ಕೆಮಿಕಲ್ ಬಿಡುಗಡೆಯಾಗುತ್ತದೆ : ನದಿ ನೀರಿನಲ್ಲಿ ಮುಳುಗಿ ಎದ್ದಾಗ ಬೀಟಾ ಎಂಡೋರ್ಫಿನ್ ಮತ್ತು ನೊರಾಡ್ರಿನಲ್ ಕೆಮಿಕಲ್ ಉತ್ಪತ್ತಿಯಾಗುತ್ತದೆ. ಇದು ನಿಮಗೆ ತಾಜಾತನವನ್ನು ನೀಡುವುದಲ್ಲದೇ ಖಿನ್ನತೆಯನ್ನು ದೂರ ಮಾಡುತ್ತದೆ.

ಒತ್ತಡದಿಂದ ಮುಕ್ತಿ : ಬೆಳಗ್ಗಿನ ಜಾವದಲ್ಲಿ ನದಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ.

ರೋಗ ನಿರೋಧಕ ಶಕ್ತಿಯ ಕೋಶದ ಉತ್ಪಾದನೆ : ನದಿ ನೀರಿನಲ್ಲಿ ಸ್ನಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೇ ದೇಹಕ್ಕೆ ಸೋಂಕು​ ತಾಗದಂತೆ ನೋಡಿಕೊಳ್ಳುತ್ತದೆ.

ನೆಗೆಟಿವಿಟಿ ದೂರಾಗುತ್ತದೆ : ಸದಾ ಕಾಲ ಒತ್ತಡ, ಯಾವುದರಲ್ಲೂ ಸಕಾರಾತ್ಮಕ ಆಲೋಚನೆಗಳು ಇಲ್ಲದಿದ್ದರೆ ಅಲ್ಲಿ ನೆಗೆಟಿವಿಟಿ ಇದೆ ಎಂದು ಅರ್ಥ. ಈ ನಿಟ್ಟಿನಲ್ಲಿ ನದಿ ನೀರಿನ ಸ್ನಾನ ನಿಮ್ಮ ನೆಗೆಟಿವಿಟಿ ದೂರ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...