ನಮ್ಮ ಬೆರಳಿನ ಉಗುರುಗಳು ಆರೋಗ್ಯ ಮತ್ತು ಸೌಂದರ್ಯದ ಪ್ರತೀಕದಂತಿದೆ. ತಿಂಗಳಿಗೆ ಸರಾಸರಿ 3.47 ಮಿಲಿ ಮೀಟರ್ನ ಹತ್ತನೇ ಒಂದು ಭಾಗದಷ್ಟು ಉಗುರ ಬೆಳೆಯುತ್ತದೆ. ಕೆರಾಟಿನ್ ಎನ್ನುವ ಗಟ್ಟಿಯಾದ ಪ್ರೊಟೀನ್ ನಮ್ಮ ಉಗುರಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಉಗುರಿನ ಆರೋಗ್ಯದ ಮೇಲೆ ನಮ್ಮ ದೈಹಿಕ ಆರೋಗ್ಯವೂ ನಿರ್ಧರಿತವಾಗುತ್ತದೆ.
ಉಗುರುಗಳು ಒರಟಾಗಿರದೇ ನಯವಾಗಿ ಮತ್ತು ದೃಢವಾಗಿರಬೇಕು. ಬಣ್ಣದಲ್ಲೂ ಯಾವ ವ್ಯತ್ಯಾಸಗಳಿರಬಾರದು. ಇವು ಆರೋಗ್ಯಕರ ಉಗುರಿನ ಲಕ್ಷಣವಾಗಿದೆ. ಇನ್ನೂ ನೀವು ಉಗುರು ಬೆಳೆಸಿ ಅಂದವಾಗಿಟ್ಟುಕೊಳ್ಳಬೇಕು ಎನ್ನುವ ಯೋಜನೆಯಲ್ಲಿದ್ದರೆ ಈ ಟಿಪ್ಸ್ಗಳನ್ನು ಅನುಸರಿಸಬಹುದು.
1. ಬೆಳ್ಳುಳ್ಳಿ : ಬೆಳ್ಳುಳ್ಳಿಯಲ್ಲಿ ಸೆಲೆನಿಯಮ್ ಅಂಶ ಹೇರಳವಾಗಿದ್ದು ಬೇಗನೇ ಉಗುರು ಬೆಳೆಯಲು ನೆರವಾಗುತ್ತದೆ. ಆದ್ದರಿಂದ ಆಗಾಗ ಬೆಳ್ಳಿಳ್ಳಿ ಬಿಡಿಸುವುದು ನಿಮ್ಮ ಉಗುರಿಗೆ ಒಂದು ರೀತಿ ಮಸಾಜ್ನಂತೆಯೇ ಇರುತ್ತದೆ.
2. ಕೊಬ್ಬರಿ ಎಣ್ಣೆ : ಕೊಬ್ಬರಿ ಎಣ್ಣೆಯಲ್ಲಿ ಉಗುರುಗಳನ್ನು ಮಸಾಜ್ ಮಾಡುವುದು ಬಹಳ ಮುಖ್ಯವಾಗುತ್ತದೆ. ಈ ರೀತಿ ಮಾಡುವುದರಿಂದ ವೇಗವಾಗಿ ಉಗುರು ಬೆಳೆಯುತ್ತದೆ.
3. ಗ್ರೀನ್ ಟೀ : ಗ್ರೀನ್ ಟೀ ಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಇದು ಉಗುರು ಕೀಳುವುದನ್ನು ತಡೆಯುವುದಲ್ಲದೇ ಉಗುರಿನ ದೃಢತೆ ಹೆಚ್ಚಿಸುತ್ತದೆ. ವಾರಕ್ಕೊಮ್ಮೆ ಗ್ರೀನ್ ಟೀಯಿಂದ ಉಗುರುಗಳಿಗೆ ಮಸಾಜ್ ನೀಡುವುದು ಪ್ರಯೋಜನಕಾರಿ.
4. ಮೊಟ್ಟೆ : ಮೊಟ್ಟೆಯಲ್ಲಿ ಸಲ್ಫರ್ ಅಂಶ ಹೇರಳವಾಗಿರುವ ಕಾರಣ ಉಗುರು ಬಹಳ ಬೇಗನೇ ಬೆಳವಣಿಗೆ ಕಾಣುತ್ತದೆ. ಈ ನಿಟ್ಟಿನಲ್ಲಿ ಮೊಟ್ಟೆಯ ಬಿಳಿ ಭಾಗವನ್ನು ಉಗುರಗಳ ಮಸಾಜ್ಗೆ ಬಳಸಬಹುದು. ಇದರಿಂದ ಉಗುರಿನ ಹೊಳಪು ಕೂಡ ಹೆಚ್ಚಾಗುತ್ತದೆ.
5. ಅಲೋವೆರಾ : ಅಲೋವೆರಾ ನಿಮ್ಮ ಉಗುರುಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಆ ಮೂಲಕ ಉಗುರು ಅತ್ಯಂತ ವೇಗವಾಗಿ ಬೆಳೆಯುತ್ತದೆ. ಆಕರ್ಷಕ ಉಗುರು ನಿಮ್ಮದಾಗುತ್ತದೆ.
6. ಶಿಯಾ ಬಟರ್ : ವಾರದಲ್ಲಿ ಒಮ್ಮೆ ಅಥವಾ 2 ಬಾರಿ ಶಿಯಾ ಬಟರ್ ಅನ್ನು ನಿಮ್ಮ ಉಗುರುಗಳಿಗೆ ಲೇಪಿಸಿ ಮಸಾಜ್ ಮಾಡಿಕೊಳ್ಳಿ. ಇದು ಉಗುರಿನ ಆರೋಗ್ಯಕ್ಕೆ ಪ್ರಯೋಜನಕಾರಿ.