* ಮಾವಿನ ಹಣ್ಣಿನ ಗೊರಟನ್ನು ಸ್ನಾನ ಮಾಡುವಾಗ ಮೈ ಉಜ್ಜಲು ಬಳಸಿದರೆ ಅನೇಕ ಚರ್ಮ ರೋಗ ನಿವಾರಣೆಯಾಗುತ್ತದೆ ಹಾಗೂ ಬೆವರಿನ ವಾಸನೆಯೂ ಕಡಿಮೆಯಾಗುತ್ತದೆ.
* ಮಾವಿನ ಹಣ್ಣನ್ನು ಮರದಿಂದ ಕಿತ್ತ ತಕ್ಷಣ ಬರುವ ಅಂಟು ದ್ರವವನ್ನು ಗಜಕರ್ಣ ಹಾಗೂ ಇಸುಬಿಗೆ ಔಷಧಿಯಾಗಿ ಬಳಸಬಹುದು. ಕತ್ತಿನ ಸುತ್ತಲು ಇರುವ ಕಪ್ಪು ಕಲೆಯನ್ನು ಹೋಗಲಾಡಿಸಲು ಹುಳಿ ಮಾವಿನ ಹಣ್ಣಿನ ಗೊರಟಿಗೆ ಸ್ವಲ್ಪ ಉಪ್ಪು ಹಚ್ಚಿ ಲಘುವಾಗಿ ಗೊರಟಿನಿಂದ ಮಸಾಜ್ ಮಾಡಿದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ.
* ಮೊಣಕೈ ಹಾಗೂ ಕಾಲಿನ ಮಂಡಿಯ ಬಳಿ ಕಪ್ಪು ಕಲೆ ಹಾಗೂ ಚರ್ಮ ಒರಟಾಗಿದ್ದರೆ ಹುಳಿ ಮಾವಿನ ತಿರುಳಿಗೆ ಸ್ವಲ್ಪ ಬೆಣ್ಣೆ ಸೇರಿಸಿ ಮಸಾಜ್ ಮಾಡಿ ನೋಡಿ.
* ಮಕ್ಕಳಲ್ಲಿ ಕಾಡುವ ತುರಿಕೆಗೆ ಹುಳಿ ಮಾವಿನ ರಸವನ್ನು ಲೇಪಿಸುವುದರಿಂದ ಉತ್ತಮ ಫಲ ದೊರೆಯುತ್ತದೆ.
* ಇದನ್ನು ಬೇಯಿಸಿ ಕೂಡ ಚರ್ಮ ಹಾಗೂ ಕೂದಲಿಗೆ ಲೇಪಿಸಬಹುದು. ಇದರಿಂದ ಚರ್ಮ ಹಾಗೂ ಕೂದಲು ನಯವಾಗುತ್ತದೆ.
* ತಲೆಯಲ್ಲಿ ಹೊಟ್ಟು ಅಥವಾ ತುರಿಕೆ ಇದ್ದರೆ ಬೇಯಿಸಿದ ಹುಳಿ ಮಾವಿನ ಹಣ್ಣಿಗೆ ಸ್ವಲ್ಪ ಸೀಗೆಕಾಯಿ ಹಾಗೂ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ಕೂದಲಿನ ಬುಡಕ್ಕೆ ಹಚ್ಚಿ 15 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
* ಬೇಸಿಗೆಯಲ್ಲಿ ಕೂದಲು ಕಳಾಹೀನವಾಗಿ, ಅಂಟಿಕೊಂಡಂತಿದ್ದರೆ ಹುಳಿ ಮಾವಿನ ರಸಕ್ಕೆ ಸ್ವಲ್ಪ ಮುಲ್ತಾನಿ ಮಿಟ್ಟಿ ಹಾಗೂ ಮೊಸರನ್ನು ಬೆರೆಸಿ ಕೂದಲಿಗೆ ಹಚ್ಚಿ.
* ಮಾವಿನ ಸೇವನೆಯಿಂದ ರಕ್ತಹೀನತೆ, ರೋಗ ನಿರೋಧಕ ಶಕ್ತಿ, ಜೀರ್ಣಶಕ್ತಿ, ಮಲಬದ್ಧತೆ ಹೀಗೆ ಇನ್ನೂ ಅನೇಕ ರೋಗಗಳಿಗೆ ಪರಿಹಾರ ಕಾಣಬಹುದು.