ದೇಹದಲ್ಲಿ ರಕ್ತದ ಕೊರತೆ ಉಂಟಾದ್ರೆ ಅನೇಕ ರೀತಿಯ ಸಮಸ್ಯೆಗಳು ಶುರುವಾಗುತ್ತವೆ. ರಕ್ತಹೀನತೆಯಿದ್ದಾಗ ಏನು ತಿನ್ನಬೇಕು ಅನ್ನೋ ಗೊಂದಲವೂ ಶುರುವಾಗುತ್ತದೆ. ರಕ್ತದ ಕೊರತೆ ನೀಗಿಸುವಂತಹ ಹಣ್ಣು, ತರಕಾರಿಗಳ ಪಟ್ಟಿಯನ್ನು ವೈದ್ಯರೇ ನೀಡ್ತಾರೆ. ಅದರ ಜೊತೆಗೆ 4 ಬಗೆಯ ಜ್ಯೂಸ್ಗಳನ್ನು ಸೇವನೆ ಮಾಡಿದ್ರೆ ರಕ್ತದ ಕೊರತೆಯನ್ನು ಸುಲಭವಾಗಿ ಹೋಗಲಾಡಿಸಬಹುದು.
ದ್ರಾಕ್ಷಿ ಹಣ್ಣಿನ ಜ್ಯೂಸ್ : ದ್ರಾಕ್ಷಿ ಹಣ್ಣಿನ ಜ್ಯೂಸ್ ರಕ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಈ ಜ್ಯೂಸ್ ಕುಡಿದರೆ ದೇಹವೂ ತಂಪಾಗಿರುತ್ತದೆ. ಜೊತೆಗೆ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ. ದ್ರಾಕ್ಷಿಯನ್ನು ಹಾಗೇ ತಿನ್ನಬಹುದು. ಅಥವಾ ದ್ರಾಕ್ಷಿ ಜ್ಯೂಸ್ ಮಾಡಿಕೊಂಡು ಅದಕ್ಕೆ ಸ್ವಲ್ಪ ಬ್ಲಾಕ್ ಸಾಲ್ಟ್ ಸೇರಿಸಿಕೊಂಡು ಕುಡಿಯಿರಿ.
ಅಲೋವೆರಾ ಜ್ಯೂಸ್ : ಅಲೋವೆರಾ ಕೂಡ ರಕ್ತಹೀನತೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಕೂದಲಿನ ಆರೋಗ್ಯ ಹಾಗೂ ತ್ವಚೆಗೆ ಕೂಡ ಇದು ಪ್ರಯೋಜನಕಾರಿಯಾಗಿದೆ. ಪ್ರತಿದಿನ ಒಂದು ಲೋಟ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ರಕ್ತವನ್ನು ಶುದ್ಧೀಕರಿಸಬಹದು. ಇದರಿಂದ ಹಿಮೋಗ್ಲೋಬಿನ್ ಪ್ರಮಾಣ ಸಹ ಹೆಚ್ಚಾಗುತ್ತದೆ.
ಮಾವಿನ ಹಣ್ಣಿನ ಜ್ಯೂಸ್ : ರಕ್ತದ ಕೊರತೆ ಇದ್ದರೆ ಮಾವಿನ ಹಣ್ಣನ್ನು ತಿನ್ನಬೇಕು. ಅಥವಾ ಮಾವಿನ ಹಣ್ಣಿನ ಜ್ಯೂಸ್ ಮಾಡಿಕೊಂಡು ಕುಡಿಯಿರಿ. ಬೇಸಿಗೆ ಮಾವಿನ ಸೀಸನ್ ಕೂಡ ಆಗಿರುವುದರಿಂದ ನೀವು ಆರಾಮಾಗಿ ಇದನ್ನು ಸೇವನೆ ಮಾಡಬಹುದು.
ಬೀಟ್ರೂಟ್ ಜ್ಯೂಸ್ : ರಕ್ತಹೀನತೆ ಇದ್ದರೆ ಹೆಚ್ಹೆಚ್ಚು ಬೀಟ್ರೂಟ್ ತಿನ್ನುವಂತೆ ವೈದ್ಯರು ಸಲಹೆ ಕೊಡ್ತಾರೆ. ಬೀಟ್ರೂಟ್ ಅನ್ನು ಮೇಲೋಗರಗಳಲ್ಲಿ ಬಳಸಬಹುದು. ಅದು ಇಷ್ಟವಾಗದೇ ಇದ್ದರೆ ಜ್ಯೂಸ್ ಮಾಡಿ ಕುಡಿಯಿರಿ. ಇದರಿಂದ ಖಂಡಿತವಾಗಿಯೂ ರಕ್ತದ ಕೊರತೆ ನೀಗುತ್ತದೆ.