HomeLatest Newsದಿಢೀರ್ ನೆ ಮಾಡಬೇಕಂದ್ರೆ ಹೀರೆಕಾಯಿ, ಗುಳ್ಳ ಬದನೇ ಗೊಜ್ಜು ಬೆಸ್ಟ್

ದಿಢೀರ್ ನೆ ಮಾಡಬೇಕಂದ್ರೆ ಹೀರೆಕಾಯಿ, ಗುಳ್ಳ ಬದನೇ ಗೊಜ್ಜು ಬೆಸ್ಟ್

ನೀವೇನಾದ್ರೂ ಅರ್ಜೆಂಟ್​ನಲ್ಲಿ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟಕ್ಕೆ ಅಡುಗೆ ಯೋಚ್ನೇ ಮಾಡ್ತಿದ್ರೆ ಹೀರೆಕಾಯಿ, ಗುಳ್ಳಬದನೇ ಬಜ್ಜಿ ಗೊಜ್ಜು ಟ್ರೈ ಮಾಡಿ. ಬಹಳ ವಿಶೇಷವಾದ ಈ ರೆಸಿಪಿ ಅನ್ನ, ಚಪಾತಿ, ದೋಸೆಗೆ ಬೆಸ್ಟ್ ಕಾಂಬಿನೇಷನ್.

ಮೊದಲಿಗೆ ಹೀರೆಕಾಯಿ ಸಿಪ್ಪೆ ತುರಿದು ಹೆಚ್ಚಿಟ್ಟುಕೊಳ್ಳಬೇಕು. ನಂತರ 2 ಗುಳ್ಳಬದನೇಕಾಯಿಯನ್ನು ಹೆಚ್ಚಿಟ್ಟುಕೊಳ್ಳಬೇಕು. ಈಗ ಕುಕ್ಕರ್​ಗೆ ಒಂದು ಕಪ್ ತೊಗರಿ ಬೇಳೆ ಹಾಕಿಕೊಳ್ಳಬೇಕು. ಇದಕ್ಕೆ ಹೀರೆಕಾಯಿ, ಗುಳ್ಳಬದನೇಕಾಯಿ ಹಾಕಬೇಕು. ಬಳಿಕ 2 ಲೋಟ ನೀರು, ರುಚಿಗೆ ತಕ್ಕಷ್ಟು ಉಪ್ಪು, 3 ಹಸಿಮೆಣಸಿನಕಾಯಿ, ಸ್ವಲ್ಪ ಸಾಂಬರು ಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು.

ನಂತರ ಇದಕ್ಕೆ ಹೆಚ್ಚಿಕೊಂಡಿರುವ 2 ಟೊಮ್ಯಾಟೊ, ಎರಡು ಈರುಳ್ಳಿ ಸೇರಿಸಿಕೊಳ್ಳಬೇಕು. ಬಳಿಕ ಒಂದು ನಿಂಬೆ ಗಾತ್ರದಷ್ಟು ಹುಣಸೇಹಣ್ಣನ್ನು ನೀರಿನಲ್ಲಿ ನೆನೆಸಿಟ್ಟು ಆ ರಸವನ್ನು ಸೇರಿಸಿಕೊಳ್ಳಬೇಕು.‌ ಈಗ ಈ ಎಲ್ಲಾ ಮಿಶ್ರಣವನ್ನು ಕುಕ್ಕರ್ ಮುಚ್ಚಳ ಮುಚ್ಚಿ ಮೂರು ವಿಶಲ್ ಬರಿಸಿಕೊಳ್ಳಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಕ್ಕರ್ ತಣ್ಣಗಾದ ಬಳಿಕ ಮುಚ್ಚಳ ತೆಗೆದು ಸ್ವಲ್ಪ ಕೈಯಾಡಬೇಕು. ಈಗ ಕುಕ್ಕರ್​ನಲ್ಲಿರುವ ಸ್ವಲ್ಪ ಸಾರನ್ನು ಎತ್ತಿಟ್ಟುಕೊಂಡರೆ ಮಧ್ಯಾಹ್ನಕ್ಕೆ ಅನ್ನದ ಜೊತೆಗೆ ಸೇವಿಸಬಹುದು. ಉಳಿದ ಅರ್ಧ ಮಿಶ್ರಣವನ್ನು ಮಿಕ್ಸಿ ಜಾರಿಗೆ ಹಾಕಿ ಒಂದು ತಿರುವು ತಿರುವಿಕೊಳ್ಳಬೇಕು. ಬಳಿಕ ಹೀಗೆ ತಿರುವಿಕೊಂಡ ಮಿಶ್ರಣಕ್ಕೆ, ಸಾಸಿವೆ, ಕರಿಬೇವು ಮತ್ತು ಕೆಂಪುಮೆಣಸಿನಕಾಯಿ ಸೇರಿಸಿ ಒಗ್ಗರಣೆ ಕೊಡಬೇಕು. ಇಷ್ಟಾದರೆ ಹೀರೆಕಾಯಿ, ಗುಳ್ಳಬದನೇಕಾಯಿ ಬಜ್ಜಿ ಗೊಜ್ಜು ಚಪಾತಿ, ದೋಸೆ ಜೊತೆಗೆ ಸವಿಯಲು ಸಿದ್ಧ.

ನೀವು ವರ್ಕಿಂಗ್​ ವುಮೆನ್ ಆಗಿದ್ದರೆ ಈ ರೀತಿಯ ಅಡುಗೆಗಳು ನಿಮಗೆ ಉಪಯುಕ್ತವಾಗಿರುತ್ತದೆ. ರುಚಿಯಾಗಿರುವುದಲ್ಲದೇ ಮತ್ತು ತ್ವರಿತವಾಗಿ ಸಿದ್ಧವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular