ʼತುಳಸಿʼ ಮಾಲೆ ಧರಿಸುವುದ್ರಿಂದ ಇವೆ ಸಾಕಷ್ಟು ಲಾಭ

ಹಿಂದೂ ಧರ್ಮದಲ್ಲಿ ತುಳಸಿಗೆ ದೇವರ ಸ್ಥಾನ ನೀಡಲಾಗಿದೆ. ಇದಕ್ಕೆ ತುಳಸಿ ಮಾತೆ ಎಂದು ಕರೆಯುತ್ತಾರೆ. ತುಳಸಿಯಲ್ಲಿ ಸಾಕಷ್ಟು ಔಷಧಿ ಗುಣವಿದೆ. ತುಳಸಿ ಎಲೆ, ಬೇರು, ಬೀಜವನ್ನು ಅನೇಕ ಔಷಧಿಗಳಿಗೆ ಬಳಸಲಾಗುತ್ತದೆ. ತುಳಸಿ ಮಾಲೆಗೂ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನ ನೀಡಲಾಗಿದೆ. ತುಳಸಿ ಮಾಲೆ ಧರಿಸುವುದ್ರಿಂದ ಸಾಕಷ್ಟು ಲಾಭಗಳಿವೆ.

ತುಳಸಿ ಮಾಲೆ ಧರಿಸುವುದ್ರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ. ಇದ್ರ ಜೊತೆಗೆ ಜಾತಕದಲ್ಲಿ ಗುರು ಹಾಗೂ ಬುಧ ಗ್ರಹಗಳು ಬಲ ಪಡೆಯುತ್ತವೆ.

ಕೊರಳಿಗೆ ತುಳಸಿ ಮಾಲೆ ಧರಿಸುವುದ್ರಿಂದ ಅನೇಕ ರೋಗಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

ತುಳಸಿ ಮಾಲೆ ಧರಿಸುವುದ್ರಿಂದ ಜೀವನದಲ್ಲಿ ಸಕಾರಾತ್ಮಕ ಶಕ್ತಿ ಪ್ರವೇಶವಾಗುತ್ತದೆ.

ನಕಾರಾತ್ಮಕ ಶಕ್ತಿ ದೂರವಾಗಿ ಜೀವನದ ಉತ್ಸಾಹ ಹೆಚ್ಚಾಗುತ್ತದೆ.

ತುಳಸಿ ಮಾಲೆಯನ್ನು ಧರಿಸುವುದ್ರಿಂದ ಕೆಟ್ಟ ದೃಷ್ಟಿ ಬೀಳುವುದಿಲ್ಲ.

ತುಳಸಿ ಮಾಲೆ ಧರಿಸುವ ಮೊದಲು ಗಂಗಾ ಜಲದಲ್ಲಿ ಸ್ವಚ್ಛಗೊಳಿಸಿ ಧೂಪವನ್ನು ತೋರಿಸಬೇಕು.

ತುಳಸಿ ಮಾಲೆ ಧರಿಸುವವರು ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ತಿನ್ನಬಾರದು.

ಮಾಂಸಾಹಾರ ಸೇವನೆಯನ್ನು ಕೂಡ ನಿಲ್ಲಿಸಬೇಕು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read