ಒಂದು ಗ್ಲಾಸ್ ʼಹಾಲುʼ ಬದಲಿಸುತ್ತೆ ನಿಮ್ಮ ಅದೃಷ್ಟ

ಹಾಲು ನಮ್ಮ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಹಾಲು ಆರೋಗ್ಯವನ್ನು ವೃದ್ಧಿಸುತ್ತದೆ. ಹಾಗೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಹಾಲಿಗೆ ಮಹತ್ವದ ಸ್ಥಾನವಿದೆ. ಹಾಲು ರಾಹುವನ್ನು ಪ್ರತಿನಿಧಿಸುತ್ತದೆ. ಶಾಸ್ತ್ರದಲ್ಲಿ ಹೇಳಿದ ಹಾಲಿನ ಉಪಾಯ ನಿಮ್ಮ ಅದೃಷ್ಟವನ್ನು ಬದಲಿಸಬಲ್ಲದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿಮಗೆ ಅಥವಾ ಸಂಬಂಧಿಕರಿಗೆ ಪದೇ ಪದೇ ಅಪಘಾತವಾಗ್ತಿದ್ದರೆ 400 ಗ್ರಾಂ ಹಾಲನ್ನು ನದಿಗೆ ಹಾಕಬೇಕು. ಹಾಲಿಗೆ ಸಕ್ಕರೆ ಹಾಗೂ ಅಕ್ಕಿ ಹಾಕಿ ನದಿಗೆ ಚೆಲ್ಲಬೇಕು.

ಜೀವನದಲ್ಲಿ ಯಾವುದೇ ಕೆಲಸವಾಗ್ತಿಲ್ಲ, ಕೆಲಸ ಅರ್ಧಕ್ಕೆ ನಿಂತಿದೆ ಎಂದಾದ್ರೆ ಮನೆ ಅಕ್ಕಪಕ್ಕ ಹರಿಯುವ ನೀರಿಗೆ ಸ್ವಲ್ಪ ಹಾಲನ್ನು ಹಾಕಿ.

ಜೀವನದಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದ್ದರೆ ರಾತ್ರಿ ಮಲಗುವ ಮೊದಲು ತಲೆ ಬಳಿ ಒಂದು ಗ್ಲಾಸ್ ಹಾಲನ್ನಿಟ್ಟು ಮಲಗಿ. ಬೆಳಿಗ್ಗೆ ಎದ್ದ ತಕ್ಷಣ ಹಾಲನ್ನು ಚೆಲ್ಲಿ.

ಹಾಲಿಗೆ ಸಕ್ಕರೆಯನ್ನು ಬೆರೆಸಿ ಅಶ್ವತ್ಥ ಮರದ ಕೆಳಗೆ ಹಾಕಿದ್ರೆ ಲಕ್ಷ್ಮಿ ಪ್ರಸನ್ನಳಾಗ್ತಾಳೆ.

ಜಾತಕದಲ್ಲಿ ದೋಷವಿರುವವರು ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗಿ ಹಾಲನ್ನು ಅರ್ಪಿಸಬೇಕು. ಗೃಹ ದೋಷ ನಿವಾರಣೆಯಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read