ಭಾರತೀಯ ಸಂಸ್ಕೃತಿಯಲ್ಲಿ ವಾಸ್ತು ಮೊದಲಿನಿಂದ ಇದ್ದರೂ, ಅದು ಫೇಮಸ್ ಆಗಿದ್ದು ಇತ್ತೀಚಿನ ದಶಕದಲ್ಲಿ. ಹೌದು ನಮ್ಮಲ್ಲಿ ಮೊದಲಿನಿಂದಲೂ ಅಗ್ನಿ ಮೂಲೆ ಇಲ್ಲಿರಬೇಕು, ನೀರಿನ ತೊಟ್ಟಿ ಅಲ್ಲಿರಬೇಕು ಎಂದೆಲ್ಲಾ ಹೇಳಿ ಅದೇ ರೀತಿ ಮನೆಯ ವಿನ್ಯಾಸವನ್ನು ಮಾಡಲಾಗುತ್ತಿತ್ತು.
ಇಲ್ಲಿ ನಿಮಗೆ ಭಾರತೀಯ ವಾಸ್ತುವಿನ ಕುರಿತು ಕೆಲ ಮಾಹಿತಿ ನೀಡಲಾಗುತ್ತಿದೆ. ಮನೆಯ ಬಾಗಿಲಿನ ಹೊರಗೆ ನಾಮಫಲಕ ಇದ್ದರೆ ಒಳ್ಳೆಯದು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹಣತೆ ಮತ್ತು ಊದುಬತ್ತಿ ಹಚ್ಚಬೇಕು.
ಆಗ್ನೇಯ ದಿಕ್ಕಿನಲ್ಲಿ ಅಂದರೆ ದಕ್ಷಿಣ ಮತ್ತು ಪೂರ್ವ ಮಧ್ಯದ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು. ಅದು ಇಲ್ಲವೆಂದಾದಲ್ಲಿ ನಿಮ್ಮ ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಗ್ಯಾಸ್ ಸ್ಟವ್ ಆದರೂ ಇಟ್ಟರೆ ಒಳ್ಳೆಯದು.
ಒಂದು ಗ್ಲಾಸ್ ನೀರಿನಲ್ಲಿ ನಿಂಬೆಹಣ್ಣು ಇಡಬೇಕು. ಪ್ರತಿ ಶನಿವಾರ ಅದನ್ನು ಬದಲಿಸಬೇಕು. ಇದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ನಶಿಸುತ್ತದೆ. ಅಡುಗೆ ಮನೆಯಲ್ಲಿ ಔಷಧ ಇಡಬೇಡಿ, ಇದರಿಂದ ನೆಗೆಟಿವ್ ಎನರ್ಜಿ ಬರಬಹುದು. ದಿನಕ್ಕೆ ಒಂದು ಸಲವಾದರೂ ಧ್ಯಾನ ಮತ್ತು ದೇವರ ಸ್ಮರಣೆ ಮಾಡಿ, ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಸಂಚಯವಾಗುತ್ತದೆ.
ನೀವು ಮಲಗುವ ಕೋಣೆಯಲ್ಲಿ ಕನ್ನಡಿ ಇಟ್ಟುಕೊಳ್ಳಬಾರದು. ಒಂದು ವೇಳೆ ಅದನ್ನು ತೆಗೆಯಲು ಸಾಧ್ಯವಿಲ್ಲದಿದ್ದರೆ, ನೀವು ಮಲಗುವ ಹಾಸಿಗೆಯಿಂದ ಏಳುವಾಗ ನಿಮ್ಮ ಮುಖ ಕಾಣದಂತೆ ಇರಬೇಕು. ಅಥವಾ ಕನ್ನಡಿಯನ್ನು ಬಟ್ಟೆಯಿಂದ ಮುಚ್ಚಿ ಆ ನಂತರ ಮಲಗಿ. ಮನೆಯ ಮೂಲೆಯಲ್ಲಿ ವಾರಕ್ಕೊಮ್ಮೆ ದೇವರ ತೀರ್ಥವನ್ನು ಇಟ್ಟು ವಾರಕ್ಕೊಮ್ಮೆ ಬದಲಿಸಬೇಕು.
ಓಂ ಮತ್ತು ಸ್ವಸ್ತಿಕ್ ಚಿಹ್ನೆಗಳನ್ನು ಬಾಗಿಲಲ್ಲಿ ಹಾಕಬೇಕು. ಪೂಜೆ ಮಾಡುವಾಗ ಗಂಟೆ ಬಾರಿಸುವುದರಿಂದ ಪಾಸಿಟಿವ್ ಎನರ್ಜಿ ಬರುತ್ತದೆ. ಹಾಗಾಗಿ ಕಾಂಪೌಂಡ್ ಗೇಟಿಗೆ ಗಂಟೆಗಳನ್ನು ಕಟ್ಟಿರಿ. ಮನೆಯ ಮೂಲೆಗಳಲ್ಲಿ ಉಪ್ಪನ್ನು ಇಟ್ಟರೆ ನೆಗೆಟಿವ್ ಎನರ್ಜಿಯನ್ನು ಹೀರಿಕೊಳ್ಳುತ್ತದೆ. ಅಳುತ್ತಿರುವ ಹೆಂಗಸು, ಯುದ್ಧದ ದೃಶ್ಯ, ಲೈಂಗಿಕವಾಗಿ ಉದ್ರೇಕಿಸುವ ಭಂಗಿಗಳು, ಕೋಪೋದ್ರಿಕ್ತ ವ್ಯಕ್ತಿ, ಗೂಬೆ, ರಣಹದ್ದು ಇವು ಅಪಶಕುನಗಳಾಗಿದ್ದು, ಈ ಪೋಟೋಗಳನ್ನು ಮನೆಯ ಗೋಡೆಗೆ ತೂಗು ಹಾಕಬೇಡಿ. ಲಿವಿಂಗ್ ರೂಂ ನ ಆಗ್ನೇಯ ದಿಕ್ಕಿನಲ್ಲಿ ಆಕ್ವೇರಿಯಂ ಇಟ್ಟರೆ ಐಶ್ವರ್ಯ ಬರುತ್ತದೆ.