
ಸ್ಮಾರ್ಟ್ ಫೋನ್ ಖರೀದಿಸುವುದು ಸುಲಭದ ಮಾತಲ್ಲ. ಎಲ್ಲಾ ಫೀಚರ್ಸ್ ಇರುವ ಸ್ಮಾರ್ಟ್ ಫೋನ್ ತುಂಬಾ ದುಬಾರಿ. ಹಾಗಾಗಿ ಆಗಾಗ ಫೋನ್ ಬದಲಾಯಿಸೋದು ಕೆಲವರ ಅಭ್ಯಾಸ.
ನಿಮ್ಮ ಫೋನ್ ಕೂಡ ಹಳೆಯದಾಗಿದ್ರೆ ನೀವು ತಕ್ಷಣ ಹೊಸ ಫೋನ್ ಖರೀದಿ ಮಾಡಬೇಕಾಗಿಲ್ಲ. ಅದನ್ನೇ ಹೊಸದಾಗಿ ಕಾಣುವಂತೆ ಮಾಡಲು ಅದ್ಭುತವಾದ ಟ್ರಿಕ್ಸ್ ಇದೆ. ಇದಕ್ಕೆ ಖರ್ಚಾಗೋದು ಕೇವಲ 100 ರೂಪಾಯಿ.
100 ರೂಪಾಯಿಗಳಲ್ಲಿ ಮೊಬೈಲ್ ಅನ್ನು ಹೊಸದಾಗಿ ಕಾಣುವಂತೆ ಮಾಡಲು ನೀವು ಆಯ್ಕೆ ಮಾಡಿಕೊಳ್ಳಬೇಕಿರೋದು ‘ಸ್ಮಾರ್ಟ್ ಫೋನ್ ಸ್ಕಿನ್’ ಅನ್ನು. ಈ ‘ಸ್ಮಾರ್ಟ್ಫೋನ್ ಸ್ಕಿನ್’ ಎಂದರೇನು ? ಅದು ನಿಮ್ಮ ಫೋನನ್ನು ಹೇಗೆ ಹೊಸದಾಗಿರುತ್ತದೆ ಎಂಬುದನ್ನು ನೋಡೋದಾದ್ರೆ, ಹೆಸರೇ ಸೂಚಿಸುವಂತೆ ಇದೊಂದು ರೀತಿಯ ವಿಶೇಷ ಚರ್ಮ. ಅದನ್ನು ನಿಮ್ಮ ಮೊಬೈಲ್ ಗೆ ಸುಲಭವಾಗಿ ಅಂಟಿಸಬಹುದು.
ಇದರ ಬೆಲೆ 100 ರಿಂದ 200 ರೂಪಾಯಿ ಅಷ್ಟೆ. ನಿಮ್ಮ ಹತ್ತಿರದ ಮೊಬೈಲ್ ಅಂಗಡಿಯಲ್ಲೇ ಈ ಸ್ಮಾರ್ಟ್ ಫೋನ್ ಸ್ಕಿನ್ ಸಿಗುತ್ತದೆ. ಈ ಸ್ಮಾರ್ಟ್ಫೋನ್ ಸ್ಕಿನ್, ನಿಮ್ಮ ಮೊಬೈಲ್ ನ ಲುಕ್ ಹಾಗೂ ಡಿಸೈನ್ ಅನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಜೊತೆಗೆ ಧೂಳು, ಕೊಳಕು ಮತ್ತು ನೀರಿನ ಹನಿಗಳಿಂದ ನಿಮ್ಮ ಫೋನನ್ನು ರಕ್ಷಿಸುತ್ತದೆ. ಈ ರೀತಿ ನಿಮ್ಮ ಹಳೆಯ ಫೋನನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ನೀವು ಹೊಸತರಂತೆ ಮಾಡಬಹುದು. ಇನ್ನೊಂದು ವಿಶೇಷವೆಂದ್ರೆ ಈ ಸ್ಕಿನ್ ತಾನಾಗಿಯೇ ಕಳಚಿ ಹೋಗುವುದಿಲ್ಲ. ಬೇಡವೆನಿಸಿದರೆ ನೀವೇ ಇದನ್ನು ತೆಗೆದು ಹಾಕಬೇಕು.