
ಸಾಮಾನ್ಯವಾಗಿ ಸುಗಂಧ ದ್ರವ್ಯಗಳನ್ನು ಎಲ್ಲರೂ ಇಷ್ಟಪಡ್ತಾರೆ. ಎಷ್ಟೇ ದುಬಾರಿ ಪರ್ಫ್ಯೂಮ್ ಆಗಿದ್ದರೂ ಕೆಲವೇ ಗಂಟೆಗಳಲ್ಲಿ ಅದರ ಪರಿಮಳ ಕಡಿಮೆಯಾಗಿಬಿಡುತ್ತದೆ. ಸಂಗಾತಿಯನ್ನು ಆಕರ್ಷಿಸಲೆಂದೇ ಸುಗಂಧ ದ್ರವ್ಯ ಪೂಸಿಕೊಳ್ಳುವವರಿಗೆ ಇದರಿಂದ ನಿರಾಸೆಯೂ ಆಗಬಹುದು.
ಇದು ಬಹಳ ದೊಡ್ಡ ಸಮಸ್ಯೆ ಏನಲ್ಲ. ಇದಕ್ಕಾಗಿಯೇ ವಿಶಿಷ್ಟವಾದ ಟ್ರಿಕ್ಸ್ ಇದೆ. ಹೀಗೆ ಮಾಡಿದ್ರೆ ಪರ್ಫ್ಯೂಮ್ ಗಳ ಸುಗಂಧ ದೀರ್ಘಕಾಲದವರೆಗೆ ಇರುತ್ತದೆ. ನಿಮ್ಮ ದೇಹದಲ್ಲಿ ಕೆಲವು ನಾಡಿ ಬಿಂದುಗಳಿದ್ದು, ಅಲ್ಲಿ ಇತರ ಭಾಗಗಳಿಗಿಂತ ಹೆಚ್ಚಿನ ಶಾಖವು ಬಿಡುಗಡೆಯಾಗುತ್ತದೆ. ಹಾಗಾಗಿ ಆ ಭಾಗಗಳಿಗೆ ನೀವು ಯಾವುದೇ ಸುಗಂಧವನ್ನು ಅಪ್ಲೈ ಮಾಡಿಕೊಂಡರೂ ಅದರ ಪರಿಮಳ ದೀರ್ಘಕಾಲದವರೆಗೆ ಇರುತ್ತದೆ.
1. ಮಣಿಕಟ್ಟು : ಈ ಜಾಗದಲ್ಲಿ ಪರ್ಫ್ಯೂಮ್ ಹಚ್ಚುವುದರಿಂದ ಸುಗಂಧವು ದೀರ್ಘಕಾಲ ಉಳಿಯುತ್ತದೆ. ಮಣಿಕಟ್ಟಿನ ಮೇಲೆ ಸಿಂಪಡಿಸಿದ ನಂತರ, ಅದನ್ನು ಒಣಗಲು ಬಿಡಿ. ಸುಗಂಧ ದ್ರವ್ಯವನ್ನು ಸಿಂಪಡಿಸುವ ಮೊದಲು ಮಣಿಕಟ್ಟನ್ನು ತೇವಗೊಳಿಸಿಕೊಳ್ಳಿ.
2. ಮೊಣಕೈ : ಇಲ್ಲಿ ಸುಗಂಧ ದ್ರವ್ಯವನ್ನು ಲಘುವಾಗಿ ಸಿಂಪಡಿಸಿ ಮತ್ತು ಅದನ್ನು ಸ್ವಲ್ಪ ಉಜ್ಜಿಕೊಳ್ಳಿ. ಇದು ನಿಮ್ಮ ಸುತ್ತ ಮುತ್ತಲೂ ಪರಿಮಳವನ್ನು ಹರಡುತ್ತದೆ. ಇದರಿಂದ ನೀವು ಉಲ್ಲಾಸವನ್ನು ಅನುಭವಿಸುತ್ತೀರಿ.
3. ಕುತ್ತಿಗೆ : ಕುತ್ತಿಗೆಗೆ ಸುಗಂಧ ದ್ರವ್ಯವನ್ನು ಅನ್ವಯಿಸುವ ತಂತ್ರವನ್ನು ವರ್ಷಗಳಿಂದ ಅಳವಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಕಾರಣವೆಂದರೆ ಪರಸ್ಪರ ಪ್ರೀತಿಸುವ ದಂಪತಿಗಳಿಗೆ ಇದು ವಿಶೇಷ ಸ್ಥಳವಾಗಿದೆ. ಸಂಗಾತಿಗಳು ಪರಸ್ಪರ ಪ್ರೀತಿ ವ್ಯಕ್ತಪಡಿಸುವ, ಮುದ್ದಿಸಿಕೊಳ್ಳುವ ಜಾಗ ಇದು. ಹಾಗಾಗಿ ಕುತ್ತಿಗೆ ಪರಿಮಳಯುಕ್ತವಾಗಿದ್ದಲ್ಲಿ ನಿಮ್ಮ ಸಂಗಾತಿಯನ್ನು ಸುಲಭವಾಗಿ ಆಕರ್ಷಿಸಬಹುದು.
4. ಎದೆ : ಮೊದಲು ದೇಹದ ಈ ಭಾಗಕ್ಕೆ ಮಾಯಿಶ್ಚರೈಸರ್ ಹಚ್ಚಿ ನಂತರ ನಿಮ್ಮ ನೆಚ್ಚಿನ ಪರ್ಫ್ಯೂಮ್ ಅನ್ನು ಇಲ್ಲಿ ಸ್ಪ್ರೇ ಮಾಡಿ. ಈ ಕಾರಣದಿಂದಾಗಿ ಪರಿಮಳ ಇನ್ನೂ ಚೆನ್ನಾಗಿ ಪಸರಿಸುತ್ತದೆ.
ದೇಹದ ಈ ಎಲ್ಲಾ ಭಾಗಗಳ ಜೊತೆಗೆ ನಿಮ್ಮ ಬಟ್ಟೆಯ ಮೇಲೂ ಪರ್ಫ್ಯೂಮ್ ಸ್ಪ್ರೇ ಮಾಡಿಕೊಳ್ಳಲು ಮರೆಯಬೇಡಿ. ಈ ರೀತಿ ಮಾಡುವುದರಿಂದ ನೀವು ದಿನವಿಡೀ ಸುಗಂಧ ದ್ರವ್ಯದ ಪರಿಮಳವನ್ನು ಆನಂದಿಸಬಹುದು. ಜೊತೆಗೆ ನಿಮ್ಮ ಸಂಗಾತಿಯನ್ನೂ ಸೆಳೆಯುವುದು ಸುಲಭವಾಗುತ್ತದೆ.