ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ನಿರಂತರ ಕೆಲಸ, ಒತ್ತಡದ ಜೀವನ, ಕೆಟ್ಟ ಆಹಾರ ಪದ್ಧತಿ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅನೇಕರಿಗೆ ಸದಾ ಸುಸ್ತು, ದೌರ್ಬಲ್ಯ ಕಾಡ್ತಿರುತ್ತದೆ. ಅಂಥವರು ಕೆಲ ಆಹಾರ ಸೇವನೆ ಮೂಲಕ ದೇಹಕ್ಕೆ ಶಕ್ತಿ ನೀಡಬಹುದು. ದಣಿವನ್ನು ಓಡಿಸಬಹುದು.
ನೀರಿನ ಮಹತ್ವ ಎಲ್ಲರಿಗೂ ತಿಳಿದಿದೆ. ಆದ್ರೂ ಅನೇಕರು ನೀರು ಸೇವನೆ ಮಾಡುವುದಿಲ್ಲ. ವಾಶ್ ರೂಮಿಗೆ ಹೋಗಬೇಕು ಎನ್ನುವ ಕಾರಣಕ್ಕೆ ನೀರಿನಿಂದ ದೂರವಿರುತ್ತಾರೆ. ಆದ್ರೆ ನೀರು ಶಕ್ತಿ ನೀಡುತ್ತದೆ. ದಣಿವು, ಸುಸ್ತಿಗೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದು ಮುಖ್ಯ ಕಾರಣವಾಗಿರಬಹುದು. ಹಾಗಾಗಿ ಪ್ರತಿ ದಿನ ಕನಿಷ್ಠ ಮೂರು ಲೀಟರ್ ನೀರನ್ನು ಸೇವನೆ ಮಾಡಿ.
ಪೌಷ್ಟಿಕ ಆಹಾರ ಸೇವಿಸುವುದು ಬಹಳ ಮುಖ್ಯ. ಮಾರುಕಟ್ಟೆಯಲ್ಲಿ ಸಿಗುವ ರೆಡಿಮೆಡ್ ಆಹಾರದಿಂದ ದೂರವಿರಿ. ಹಸಿರು ಸೊಪ್ಪು, ತರಕಾರಿ, ಪ್ರೋಟೀನ್ ಭರಿತ ಆಹಾರವನ್ನು ಸೇವಿಸಿ.
ನಿರಂತರ ಕೆಲಸ ದಣಿವಿಗೆ, ಸುಸ್ತಿಗೆ ಕಾರಣವಾಗುತ್ತದೆ. ಹಾಗಾಗಿ ಕಚೇರಿಯಾಗಿರಲಿ ಇಲ್ಲ ಮನೆಯಾಗಿರಲಿ ದೇಹಕ್ಕೆ ಕೆಲ ಸಮಯ ವಿಶ್ರಾಂತಿ ಅಗತ್ಯವಿರುತ್ತದೆ. ಹಾಗಾಗಿ ಕೆಲಸದ ಮಧ್ಯೆ ಸ್ವಲ್ಪ ವಿಶ್ರಾಂತಿ ಪಡೆಯಿರಿ.
ನಿಯಮಿತ ವ್ಯಾಯಾಮ ಕೂಡ ದೇಹಕ್ಕೆ ಅಗತ್ಯ. ಒಂದೇ ಕಡೆಯಲ್ಲಿ ಕುಳಿತು ಕೆಲಸ ಮಾಡುವಾಗ ದೇಹ ಬಿಗಿದುಕೊಳ್ಳುತ್ತದೆ. ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ಸದಾ ಲವಲವಿಕೆಯಿಂದ, ಆರೋಗ್ಯಕರವಾಗಿರಬೇಕೆಂದ್ರೆ ನಿಯಮಿತವಾಗಿ ವ್ಯಾಯಾಮ ಮಾಡಿ.
ಸುಖ ನಿದ್ರೆಗೆ ಮೊಬೈಲ್ ತ್ಯಜಿಸಿ. ಸದಾ ಕೈನಲ್ಲಿ ಮೊಬೈಲ್ ಹಿಡುದು ಕುಳಿತ್ರೆ ಅನೇಕ ಸಮಸ್ಯೆ ಕಾಡುತ್ತದೆ. ನಿದ್ರಾಹೀನತೆಯೂ ಇದ್ರಲ್ಲಿ ಒಂದು. ಸುಖ ನಿದ್ರೆ ದಣಿವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ತಡರಾತ್ರಿಯವರೆಗೆ ಮೊಬೈಲ್ ನೋಡುವ ಬದಲು ಬೇಗ ನಿದ್ರೆ ಮಾಡಿ.