ಪ್ರತಿದಿನ ಒಂದು ಸೇಬು ಹಣ್ಣನ್ನು ತಿಂದು, ಆಸ್ಪತ್ರೆಯಿಂದ ದೂರವಿರಿ ಎಂಬ ಮಾತನ್ನು ನೀವು ಕೇಳಿರ್ತೀರಿ. ಸೇಬು ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ನಿಯಮಿತ ಸೇವನೆಯಿಂದ ಸಾಕಷ್ಟು ಲಾಭವಿದೆ. ಸೇಬು ಹಣ್ಣಿನಲ್ಲಿ ಜೀವಸತ್ವಗಳು, ಆಂಟಿ-ಆಕ್ಸಿಡೆಂಟ್ಗಳು, ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ಗಳು, ಮೆಗ್ನೀಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಕೆ ಅಥವಾ ವಿಟಮಿನ್ ಬಿ -6 ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಸೇಬು ಸೇವನೆ ಜೊತೆ ಯಾವಾಗ ಸೇವನೆ ಮಾಡಬೇಕು ಎಂಬುದನ್ನು ತಿಳಿದಿರಬೇಕು.
ಸೇಬು ಸಿಪ್ಪೆಯಲ್ಲಿ ಫೈಬರ್ ಸಮೃದ್ಧವಾಗಿದೆ. ಹಾಗಾಗಿ ಯಾವಾಗಲೂ ಸೇಬು ಹಣ್ಣನ್ನು ಸಿಪ್ಪೆ ಸಮೇತ ಸೇವನೆ ಮಾಡಬೇಕು. ಇದು ಮಲಬದ್ಧತೆ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಸೇಬು ಹಣ್ಣೊಂದೇ ಅಲ್ಲ ಯಾವುದೇ ಹಣ್ಣನ್ನು ಸೇವಿಸುವ ಮೊದಲು ಅದನ್ನು ಚೆನ್ನಾಗಿ ತೊಳೆಯಬೇಕು. ಅರ್ಧ ಗಂಟೆಯವರೆಗೆ ಉಗುರು ಬೆಚ್ಚಗಿನ ನೀರಿನಲ್ಲಿ ಸೇಬು ಹಣ್ಣನ್ನು ನೆನೆಸಿಟ್ಟು, ನಂತ್ರ ತೊಳೆದು ಸೇವನೆ ಮಾಡುವುದು ಹೆಚ್ಚು ಪರಿಣಾಮಕಾರಿ.
ರಾತ್ರಿ ಮಲಗುವ ಮೊದಲು ಸೇಬು ಹಣ್ಣನ್ನು ಸೇವನೆ ಮಾಡಬಾರದು. ಹಗಲಿನಲ್ಲಿ ಸೇಬು ತಿನ್ನುವುದು ಉತ್ತಮ. ಖಾಲಿ ಹೊಟ್ಟೆಯಲ್ಲಿ ಸೇಬು ಹಣ್ಣಿನ ಸೇವನೆ ಮಾಡಬಹುದು.
ದಿನಕ್ಕೆ ಒಂದು ಸೇಬು ಸೇವಿಸಿದರೆ ಸಾಕು.ಇದರಲ್ಲಿ ಕೆಫೀನ್ ಕೂಡ ಕಂಡುಬರುತ್ತದೆ. ಹಾಗಾಗಿ ತೂಕವನ್ನು ನಿಯಂತ್ರಣದಲ್ಲಿಡಲು, ದಿನಕ್ಕೆ ಒಂದು ಅಥವಾ ಎರಡು ಸೇಬುಗಳನ್ನು ಮಾತ್ರ ಸೇವಿಸಿ. ಅದಕ್ಕಿಂತ ಹೆಚ್ಚು ಸೇಬು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.