ಈ ಸ್ಯಾಡ್ ಅನುಭವಿಸಲು ಪ್ರಾಥಮಿಕ ಕಾರಣವೆಂದರೆ ಚಳಿ. ಇದನ್ನ ತಪ್ಪಿಸಲು ಆದಷ್ಟು ನೈಸರ್ಗಿಕ ಬೆಳಕಿನಲ್ಲಿ ಕಾಲ ಕಳೆಯಿರಿ. ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗನೆ ಎದ್ದು ಬಿಸಿಲಿನಲ್ಲಿ ಹೊರಹೋಗಿ. ಆದಷ್ಟು ಬೆಳಕಿನಲ್ಲಿ ಆ್ಯಕ್ಟೀವ್ ಆಗಿರುವುದು ಸಹಾಯಕವಾಗುತ್ತದೆ.
ಉತ್ತಮ ಆಹಾರ ಸೇವಿಸಿ, ಜಂಕ್ ಫುಡ್ನಿಂದ ದೂರವಿರಿ
ಸಂಶೋಧನೆಯ ಪ್ರಕಾರ, ಈ ಅಸ್ವಸ್ಥತೆಗೆ ಒಳಗಾಗುವ ವ್ಯಕ್ತಿಗಳು ನಾಲಿಗೆಗೆ ರುಚಿ ನೀಡುವಂತ ಕಾರ್ಬೋಹೈಡ್ರೇಟ್-ಭರಿತ ಜಂಕ್ ಆಹಾರಗಳನ್ನು, ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದರೆ ದೇಹವನ್ನು ಚೈತನ್ಯವಾಗಿಡಲು ಆರೋಗ್ಯಕರ ಆಹಾರ ತಿನ್ನುವುದು ಉಪಯುಕ್ತ. ಅಷ್ಟೇ ಅಲ್ಲಾ ಸೂರ್ಯನ ಬೆಳಕು ಕಡಿಮೆಯಾಗುವುದರಿಂದ ಆದಷ್ಟು ವಿಟಮಿನ್ ಡಿ ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದು ಸಹಾಯಕ.
ಸಕ್ರಿಯವಾಗಿರಲು ಪ್ರಜ್ಞಾಪೂರ್ವಕ ಪ್ರಯತ್ನವನ್ನು ಮಾಡಿ
ದಣಿವು ಮತ್ತು ಆಲಸ್ಯ SADನ ರೋಗ ಸಾಮಾನ್ಯ ಲಕ್ಷಣ. ಶಕ್ತಿಯನ್ನು ಹೆಚ್ಚಿಸಲು ಮತ್ತು ಮನಸ್ಥಿತಿಯನ್ನು ಸುಧಾರಿಸಲು ದೈಹಿಕವಾಗಿ ಸಕ್ರಿಯವಾಗಿರಿ ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಪ್ರತಿದಿನ ವ್ಯಾಯಾಮ ಮಾಡಲು ಪ್ರಯತ್ನಿಸಿ. ಎಷ್ಟು ಸಕ್ರಿಯವಾಗಿರುತ್ತೇವೊ, ಮನಸ್ಸು ಮತ್ತು ದೇಹ ಅಷ್ಟೇ ಉಲ್ಲಾಸಭರಿತವಾಗಿರತ್ತದೆ ಎಂದು ತಜ್ಞರು ಹೇಳುತ್ತಾರೆ.
ಏಕಾಂತದಿಂದ ದೂರವಿರಿ
ಕತ್ತಲು ತುಂಬಿರುವ ಈ ಶೀತದ ದಿನಗಳಲ್ಲಿ, ಬೆಚ್ಚಗೆ ಒಂದುಕಡೆ ಇರಬೇಕೆಂದು ಅನ್ನಿಸುವುದು ಸಹಜ. ಆದರೆ ಈ ರೋಗ ಏಕಾಂತದಲ್ಲಿದ್ದಾಗ ಹೆಚ್ಚು ಕಾಡುತ್ತದೆ. ಕೆಲವರಂತು ಹೊರಗೆ ಹೋಗುವುದನ್ನ ತಪ್ಪಿಸಲು ಪ್ರಯತ್ನಿಸುತ್ತಾರೆ, ಆದರೆ ಈ ಏಕಾಂಗಿ ಪ್ರವೃತ್ತಿ ರೋಗವನ್ನು ಉಲ್ಭಣಗೊಳಿಸಬಹುದು. ಹಾಗಾಗಿ ಹೆಚ್ಚು ಜನರೊಂದಿಗೆ ಬೆರೆಯುವುದು ಉತ್ತಮ.