ಮನೆಯಲ್ಲಿ ಎಲ್ಲವೂ ಸರಿಯಾಗಿ ಇರಬೇಕು ಅಂದರೆ ವಾಸ್ತುಶಾಸ್ತ್ರವು ಸರಿಯಾಗಿ ಇರಬೇಕು. ನಿಮ್ಮ ಮನೆಯ ಬಣ್ಣವನ್ನೂ ವಾಸ್ತು ನಿರ್ಧರಿಸುತ್ತದೆ ಎಂದು ಹೇಳಿದರೆ ನೀವು ನಂಬಲೇಬೇಕು.
ಹಿಂದೂ ಧರ್ಮದಲ್ಲಿ ಹಳದಿ ಬಣ್ಣಕ್ಕೆ ಮಾನ್ಯತೆ ಇದ್ದರೂ ಸಹ ಇದನ್ನು ನೀವು ಕಂಡ ಕಂಡಲ್ಲಿ ಬಳಕೆ ಮಾಡುವಂತಿಲ್ಲ. ವಾಸ್ತುಶಾಸ್ತ್ರದ ಪ್ರಕಾರ ನೀವು ಆಗ್ನೇಯ ದಿಕ್ಕಿನಲ್ಲಿ ಹಳದಿ ಬಣ್ಣವನ್ನು ಬಳಕೆ ಮಾಡಬಾರದಂತೆ.
ಆಗ್ನೇಯ ದಿಕ್ಕಿನಲ್ಲಿ ಹಳದಿ ಬಣ್ಣವನ್ನು ಬಳಿದರೆ ನಿಜಕ್ಕೂ ಒಳ್ಳೆಯದಾಗುವುದಿಲ್ಲ. ಇದರಿಂದ ಕುಟುಂಬದ ಮುಖ್ಯಸ್ಥ ಹಾಗೂ ತಾಯಿಯ ಆರೋಗ್ಯ ಕೆಡಲಿದೆ ಎಂದು ನಂಬಲಾಗಿದೆ.
ಹಳದಿ ಬಣ್ಣವು ಆಗ್ನೇಯ ದಿಕ್ಕು, ಮನೆಯ ಮಧ್ಯಭಾಗ ಮತ್ತು ಸ್ವಲ್ಪ ಮಟ್ಟಿಗೆ ಮನೆಯ ಈಶಾನ್ಯಕ್ಕೆ ಸಂಬಂಧಿಸಿದೆ ಮತ್ತು ಅಗ್ನಿ ಮೂಲೆಯಲ್ಲಿಯೂ ನೀವು ಹಳದಿ ಬಣ್ಣವನ್ನು ಬಳಕೆ ಮಾಡಬಾರದು. ಬಳಕೆ ಮಾಡಿದರೆ ಕುಟುಂಬಸ್ಥರಲ್ಲಿ ದೇಹಾರೋಗ್ಯದ ಸಮಸ್ಯೆ, ಕಿರಿಯ ಪುತ್ರನಿಗೆ ತೊಂದರೆ ಹಾಗೂ ಮನೆಯ ಯಜಮಾನನಿಗೆ ಉದರ ಸಂಬಂಧಿ ಕಾಯಿಲೆಗಳು ಎದುರಾಗಲಿದೆ. ಹೀಗಾಗಿ ಆದಷ್ಟು ಆಗ್ನೇಯ ದಿಕ್ಕಿನಲ್ಲಿ ಹಳದಿ ಬಣ್ಣವನ್ನು ಬಳಕೆ ಮಾಡಲು ಹೋಗಬೇಡಿ.