ಕೂದಲು ರೇಷ್ಮೆ ಎಳೆಯಂತೆ ಕಾಣಬೇಕು ಅಂತಾ ಅನೇಕರು ಕೂದಲನ್ನು ಹೀಟ್ ಮಾಡುತ್ತಾರೆ. ಆದರೆ ಅತಿಯಾಗಿ ಸ್ಟ್ರೇಟ್ನಿಂಗ್ ಉಪಕರಣಗಳ ಬಳಕೆಯಿಂದಾಗಿ ಕೂದಲು ಶುಷ್ಕವಾಗುತ್ತದೆ. ಅಷ್ಟೆ ಅಲ್ಲದೇ ಕೂದಲು ಉದುರುವಿಕೆಗೂ ಕಾರಣವಾಗುತ್ತದೆ.
ಕೂದಲು ಹೀಗೆ ಆಯ್ತು ಅಂತಾ ಅದನ್ನು ಸರಿಪಡಿಸಲು ಮಾರುಕಟ್ಟೆಗಳಲ್ಲಿ ಸಿಗುವ ರಾಸಾಯನಿಕಗಳನ್ನು ಬಳಕೆ ಮಾಡಿಬಿಡುತ್ತೇವೆ. ಆದರೆ ಇದು ನಿಮ್ಮ ಕೂದಲನ್ನು ಮತ್ತಷ್ಟು ಹಾಳು ಮಾಡುತ್ತದೆ. ಇವುಗಳ ಬದಲಾಗಿ ನೀವು ಮನೆ ಮದ್ದುಗಳ ಉಪಯೋಗವನ್ನು ಪಡೆದುಕೊಳ್ಳಬಹುದು. ಇದು ದುಬಾರಿಯೂ ಅಲ್ಲ ಹಾಗೂ ಯಾವುದೇ ದುಷ್ಪರಿಣಾಮಗಳನ್ನೂ ಹೊಂದಿರದ ಹಿನ್ನೆಲೆಯಲ್ಲಿ ನಿಮ್ಮ ಕೂದಲಿನ ಆರೈಕೆ ಒಳ್ಳೆಯ ರೀತಿಯಲ್ಲಿ ಆಗಲಿದೆ.
ಆವಕಾಡೊ
ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಆವಕಾಡೋ ಉತ್ತಮ ಎಂದು ಹೇಳಬಹುದು. ಇದರಲ್ಲಿರುವ ಖನಿಜಾಂಶಗಳು, ವಿಟಮಿನ್‌ಗಳು ಮತ್ತು ಕೊಬ್ಬಿನ ಅಂಶವು ಕೂದಲನ್ನು ಸರಿಪಡಿಸಬಹುದು ಮತ್ತು ಅವುಗಳನ್ನು ಹೊಳೆಯುವಂತೆ ಮಾಡುತ್ತದೆ. ಹೇರ್ ಮಾಸ್ಕ್ ತಯಾರಿಸಲು, ಆವಕಾಡೊ ಹಣ್ಣನ್ನು ಹಿಟ್ಟಿನ ರೀತಿಯಲ್ಲಿ ಕಲಸಿಕೊಳ್ಳಿ ಮತ್ತು ಅದರಲ್ಲಿ ಮೊಟ್ಟೆಯನ್ನು ಬೆರೆಸಿ ಕೂದಲಿಗೆ ಹಚ್ಚಿ. ಅರ್ಧ ಗಂಟೆಯ ನಂತರ ಕೂದಲನ್ನು ತುಂಬಾ ಬಿಸಿ ಅಥವಾ ತಣ್ಣನೆಯ ನೀರಿನಿಂದ ತೊಳೆಯಿರಿ. ವಾರಕ್ಕೊಮ್ಮೆ ಇದನ್ನು ಮಾಡಿ.
ಆಲಿವ್ ಎಣ್ಣೆ
ಈ ತೈಲವನ್ನು ನೈಸರ್ಗಿಕ ಕಂಡಿಷನರ್ ಎಂದು ಪರಿಗಣಿಸಲಾಗುತ್ತದೆ. ಒಂದು ಪಾತ್ರೆಯಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ ನಂತರ ಸ್ವಲ್ಪ ತಣ್ಣಗಾದ ನಂತರ ತಲೆಗೆ ಮಸಾಜ್ ಮಾಡಿ. ಮಸಾಜ್ ಮಾಡಿದ ನಂತರ, ಬೆಚ್ಚಗಿನ ನೀರಿನಲ್ಲಿ ನೆನೆಸಿದ ಟವೆಲ್ ಅನ್ನು ಕೂದಲಿನ ಮೇಲೆ ಕಟ್ಟಿಕೊಳ್ಳಿ ಮತ್ತು ಸುಮಾರು ಅರ್ಧ ಗಂಟೆವರೆಗೆ ಈ ರೀತಿ ಇಟ್ಟುಕೊಳ್ಳಿ. ಇದರಿಂದ ಕೂದಲು ಕಳೆದು ಹೋಗಿರುವ ಹೊಳಪು ಮರಳಿ ಬರುತ್ತದೆ.
ಆ್ಯಪಲ್ ಸೀಡರ್ ವಿನೆಗರ್
ಆ್ಯಪಲ್ ಸೀಡರ್ ವಿನೆಗರ್ 2 ಚಮಚ ಆಲಿವ್ ಎಣ್ಣೆ ಹಾಗೂ 1 ಮೊಟ್ಟೆಯನ್ನು ಬೆರೆಸಿ. ಈ ಮಾಸ್ಕ್ನ್ನು ತಲೆಗೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಳಿಕ ತಲೆಯನ್ನು ಚೆನ್ನಾಗಿ ತೊಳೆಯಿರಿ. ಶಾಂಪೂವನ್ನು ಬಳಸಿ ನೀವು ಕೂದಲನ್ನು ತೊಳೆದ ಬಳಿಕ ಕಂಡಿಷನರ್ ಬಳಕೆ ಮಾಡುವುದನ್ನು ಮರೆಯಬೇಡಿ.