ಹೊಳೆಯುವ ಹಾಗೂ ಉದ್ದನೆಯ ಕೂದಲು ಪಡೆಯಬೇಕೆನ್ನುವುದು ಎಲ್ಲರ ಬಯಕೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಶಾಂಪೂ ಬಳಸ್ತಾರೆ.
ಆದ್ರೆ ದುಬಾರಿ ಶಾಂಪೂ ಬಳಸಿದ್ರೂ ಸಮಸ್ಯೆ ಕಡಿಮೆಯಾಗೋದಿಲ್ಲ.
ತಲೆಹೊಟ್ಟಿನ ಸಮಸ್ಯೆ ಅನೇಕರನ್ನು ಕಾಡುತ್ತದೆ. ನೆತ್ತಿ ಒಣಗುವುದರಿಂದ ತಲೆಹೊಟ್ಟಿನ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಮೆಂತ್ಯ ಕಾಳು ಒಳ್ಳೆಯ ಔಷಧಿ.
ಮೆಂತ್ಯ ಕಾಳಿನಿಂದ ಮಾಡಿದ ಪೇಸ್ಟ್ ತಲೆಗೆ ಹಚ್ಚಿಕೊಂಡು ತಲೆ ಹೊಟ್ಟನ್ನು ಕಡಿಮೆ ಮಾಡಿಕೊಳ್ಳಬಹುದು.
ಮೆಂತ್ಯಕಾಳು ಪೇಸ್ಟ್ ಮಾಡಲು ಬೇಕಾಗುವ ಸಾಮಗ್ರಿ:
3-4 ಚಮಚ ಮೆಂತ್ಯಕಾಳು
3 ಚಮಚ ನಿಂಬೆ ರಸ
2 ಚಮಚ ಮೊಸರು
1 ಚಮಚ ಬೇವಿನ ಪುಡಿ
ಮೆಂತ್ಯಕಾಳಿನ ಪೇಸ್ಟ್ ಮಾಡುವ ವಿಧಾನ:
ರಾತ್ರಿ ಮೆಂತ್ಯಕಾಳನ್ನು ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಅದನ್ನು ಮಿಕ್ಸಿ ಮಾಡಿ ಅದಕ್ಕೆ ಮೊಸರು, ನಿಂಬೆ ರಸ, ಬೇವಿನ ಪುಡಿಯನ್ನು ಸೇರಿಸಿ ಪೇಸ್ಟ್ ಮಾಡಿ.
ಕೂದಲಿನ ಬುಡಕ್ಕೆ ಈ ಪೇಸ್ಟ್ ಹಚ್ಚಿಕೊಳ್ಳಿ. ಅರ್ಧ ಗಂಟೆ ನಂತ್ರ ಕೂದನ್ನು ಚೆನ್ನಾಗಿ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಬಳಸಿ.
ಇದಲ್ಲದೆ ಅಡುಗೆ ಸೋಡಾವನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ ಕೂಡ ತಲೆಗೆ ಹಚ್ಚಿಕೊಳ್ಳಬಹುದು.