ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದ್ದರೆ ನೀವು ಅದನ್ನು ನಿಯಂತ್ರಿಸಲು ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆ ಮಾಡಬೇಕು. ನಿಮ್ಮ ಔಷಧಿ, ವ್ಯಾಯಾಮದ ಜೊತೆಗೆ ಆಹಾರದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ಇಲ್ಲವಾದರೆ ಅಧಿಕ ಕೊಲೆಸ್ಟ್ರಾಲ್ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಈ ಆಹಾರವನ್ನು ಸೇವಿಸಬೇಡಿ.
ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಕೊಬ್ಬಿನ ಮಾಂಸವನ್ನು ಸೇವಿಸಬೇಡಿ. ಮಾಂಸದಲ್ಲಿ ಪ್ರೋಟೀನ್, ಜೀವಸತ್ವಗಳು ಉತ್ತಮವಾಗಿರುತ್ತದೆ. ಆದರೆ ಮಾಂಸದಲ್ಲಿ ಸ್ಯಾಚುರೇಟೆಡ್ ಕೊಬ್ಬು ಇರುತ್ತದೆ. ಇಂತಹ ಮಾಂಸವನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಹಾಗಾಗಿ ಮಾಂಸವನ್ನು ಸೇವಿಸಬೇಡಿ.
ಸಿಹಿ ಮತ್ತು ಸಕ್ಕರೆಯ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ದೇಹದಲ್ಲಿನ ಉತ್ತಮ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ. ಮತ್ತುಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಹಾಗಾಗಿ ಸಕ್ಕರೆ ಬದಲಿಗೆ ಸಿಹಿ ಹಣ್ಣುಗಳನ್ನು ತಿನ್ನಿರಿ.
ಹಾಲಿನ ಉತ್ಪನ್ನಗಳಲ್ಲಿ ಕೊಬ್ಬಿನಾಂಶ ಹೆಚ್ಚಾಗಿರುತ್ತದೆ. ಹಾಗಾಗಿ ಹಾಲು, ಮೊಸರು, ಚೀಸ್, ಬೆಣ್ಣೆ ಮುಂತಾದ ಹಾಲಿನ ಉತ್ಪನ್ನಗಳನ್ನು ಸೇವಿಸಬೇಡಿ.