ಪುರುಷರು ಹಾಗೂ ಮಹಿಳೆಯರು ಇಬ್ಬರಲ್ಲಿಯೂ ಈ ಬೋಳು ತಲೆಯ ಸಮಸ್ಯೆ ಕಾಡುತ್ತದೆ. ಹೆಚ್ಚಿನವರು ಚಿಕ್ಕ ವಯಸ್ಸಿನಲ್ಲಿಯೇ ಈ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಇದಕ್ಕೆ ನಿಮ್ಮ ಕೆಟ್ಟ ಜೀವನಶೈಲಿಯೇ ಕಾರಣ. ಹಾಗಾಗಿ ಈ ಬೋಳು ತಲೆಯ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ ಈ ಯೋಗಾಸನ ಮಾಡಿ.
ಸೇತುಬಂಧಾಸನ : ಇದು ಮೆದುಳಿನ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಹೊಟ್ಟೆ ಮತ್ತು ಶ್ವಾಸಕೋಶವು ಬಲಗೊಳ್ಳುತ್ತದೆ.
ನೀವು ಬೆನ್ನಿನ ಮೇಲೆ ಮಲಗಿ ನಿಮ್ಮ ಪಾದಗಳನ್ನು ನೆಲದ ಮೇಲೆ ಚಪ್ಪಟೆ ಮಾಡಿ ನಿಮ್ಮ ಕುತ್ತಿಗೆ ಮತ್ತು ನಿಮ್ಮ ತಲೆ ಚಾಪೆಯ ಮೇಲೆ ಚಪ್ಪಟೆಯಾಗಿರುವಂತೆ ನಿಮ್ಮ ದೇಹವನ್ನು ಮೇಲಕ್ಕೆತ್ತಿ. ನಿಮ್ಮ ಕೈಗಳನ್ನು ಬೆನ್ನಿನ ಕೆಳಗೆ ಇಡಬಹುದು.
ಸರ್ವಂಗಾಸನ : ಈ ಆಸನವನ್ನು ಪ್ರತಿದಿನ ಮಾಡುವುದರಿಂದ ಬೋಳು ತಲೆಯ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಮಾನಸಿಕ ಒತ್ತಡದಿಂದ ಪರಿಹಾರ ನೀಡುತ್ತದೆ. ಇದು ಮೆದುಳಿಗೆ ಆಮ್ಲಜನಕ ಮತ್ತು ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ.
ಯೋಗ ಚಾಪೆಯ ಮೇಲೆ ಮಲಗಿಕೊಳ್ಳಿ. ನಿಮ್ಮ ಎರಡು ಪಾದಗಳ ಬೆರಳುಗಳನ್ನು ಜೋಡಿಸಿ, ಎರಡೂ ಕಾಲುಗಳನ್ನು ಒಟ್ಟಿಗೆ ಮೇಲಕ್ಕೆ ಎತ್ತಲು ಪ್ರಯತ್ನಿಸಿ. ಅಂಗೈಗಳಿಂದ ಸೊಂಟವನ್ನು ಹಿಡಿದುಕೊಳ್ಳಿ. ಮತ್ತು ಪಾದಗಳನ್ನು ಮೇಲಕ್ಕೆತ್ತಿ ಮತ್ತು ಎಷ್ಟು ಮೇಲಕ್ಕೆ ಎತ್ತಲೂ ಸಾಧ್ಯವೋ ಅಷ್ಟು ಮೇಲೆ ಎತ್ತಿ. ನಿಮ್ಮ ಇಡೀ ದೇಹದ ಭಾರವು ಭುಜಗಳ ಮೇಲೆ ಮಾತ್ರ ಇರಬೇಕು. ಸ್ವಲ್ಪ ಸಮಯ ಈ ಸ್ಥಾನದಲ್ಲಿ ಇರಿ. ಬಳಿಕ ಕಾಲುಗಳನ್ನು ಹಿಂದಕ್ಕೆ ತಂದು ಮೊದಲಿನ ಸ್ಥಿತಿಗೆ ಬನ್ನಿ.