ಆಯುರ್ವೇದದಲ್ಲಿ ಸರಿಯಾದ ಆಹಾರ ಸಂಯೋಜನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನೀವು ಎರಡು ವಿಭಿನ್ನ ಶಕ್ತಿಯ ಆಹಾರವನ್ನು ಒಟ್ಟಿಗೆ ಸೇವಿಸಿದರೆ ಗ್ಯಾಸ್ ಅಥವಾ ಅಲರ್ಜಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಸರಿಯಾದ ಆಹಾರಗಳನ್ನು ಸಂಯೋಜನೆ ಮಾಡಿ ಸೇವಿಸಿ. ಆಯುರ್ವೇದದಲ್ಲಿ ತಿಳಿಸಿದಂತೆ ನಿಂಬೆರಸವನ್ನು ಈ ಆಹಾರದಲ್ಲಿ ಮಿಕ್ಸ್ ಮಾಡಬಾರದಂತೆ.
ನಿಂಬೆಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳಿವೆ. ಇದು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಹಾಗಾಗಿ ಇದನ್ನು ಅನೇಕ ಸಲಾಡ್ ಮತ್ತು ಭಕ್ಷ್ಯಗಳಲ್ಲಿ ಸೇರಿಸುತ್ತಾರೆ. ಆದರೆ ಕೆಲವು ಹಣ್ಣುಗಳು ಮತ್ತು ತರಕಾರಿಗಳಲ್ಲಿ ನಿಂಬೆ ಸೇರಿಸುವುದು ಹಾನಿಕಾರಕ.
ನಾವು ಹೆಚ್ಚಾಗಿ ಈರುಳ್ಳಿ, ಸೌತೆಕಾಯಿ, ಟೊಮೆಟೊ ಸಲಾಡ್ ಗೆ ನಿಂಬೆ, ಚಾಟ್ ಮಸಾಲಾ ಮತ್ತು ಉಪ್ಪನ್ನು ಸೇರಿಸುತ್ತೇವೆ. ಆದರೆ ಆಯುರ್ವೇದದ ಪ್ರಕಾರ ಸೌತೆಕಾಯಿ, ಟೊಮೆಟೊ, ಹಾಲು, ಮೊಸರುಗಳಲ್ಲಿ ನಿಂಬೆ ರಸವನ್ನು ಸೇರಿಸಬಾರದು. ಆದರೆ ಸೌತೆಕಾಯಿ ಮತ್ತು ಟೊಮೆಟೊ ಜೊತೆ ಹಸಿರು ನಿಂಬೆಯನ್ನು ಸೇರಿಸಬಹುದು. ಯಾಕೆಂದರೆ ಇದರಲ್ಲಿ ಹುಳಿಯಂಶ ಕಡಿಮೆ ಇರುತ್ತದೆ.