ಕೋವಿಡ್-19 ನಮ್ಮ ಜೀವನಗಳಲ್ಲಿ ಬಹುದೊಡ್ಡ ಬದಲಾವಣೆ ತಂದುಬಿಟ್ಟಿದೆ. ಸ್ವಚ್ಛತೆ ಹಾಗೂ ನೈರ್ಮಲ್ಯದತ್ತ ಇನ್ನಷ್ಟು ಒತ್ತು ನೀಡುವಂತೆ ಈ ವೈರಸ್ ನಮ್ಮನ್ನು ಪ್ರೇರೇಪಿಸಿದೆ.
ಇದೇ ವೇಳೆ ಚಳಿಗಾಲದ ಆರಂಭವು ಇನ್ನಷ್ಟು ರೋಗಗಳನ್ನು ತರುವ ಸಾಧ್ಯತೆಗೆ ಚಾಲನೆ ಕೊಟ್ಟಿದೆ. ಇಂಥ ಸಂದರ್ಭದಲ್ಲಿ ಆಗಾಗ ಕೈ ತೊಳೆಯುವುದು ಅಗತ್ಯವಾಗಿದೆ. ಆದರೆ ಪದೇ ಪದೇ ಕೈತೊಳೆಯುವುದರಿಂದ ಕೈಗಳಲ್ಲಿ ಇರುವ ತೇವಾಂಶ ಕಳೆದುಹೋಗಲಿದೆ.
ಕೈತೊಳೆಯಲು ಥರಾವರಿ ಹ್ಯಾಂಡ್‌ವಾಶ್‌ಗಳು ಮಾರುಕಟ್ಟೆಯಲ್ಲಿದ್ದು, ಸೂಕ್ತವಾದದ್ದನ್ನು ಆಯ್ದುಕೊಳ್ಳಲು ನೀವು ಕೆಲವೊಂದು ಅಂಶಗಳನ್ನು ಮನದಲ್ಲಿ ಇಟ್ಟುಕೊಳ್ಳಬೇಕು.
ಕೀಟಾಣುಗಳಿಂದ ರಕ್ಷಣೆ
ಹ್ಯಾಂಡ್‌ವಾಶ್‌ನಲ್ಲಿ ನೀವು ಗಮನಿಸಬೇಕಾದ ಮಹತ್ವದ ವಿಚಾರವೆಂದರೆ, ಕೀಟಗಳಿಂದ ಅದು ನಿಮ್ಮನ್ನು ರಕ್ಷಿಸಬಹುದಾದ ಕ್ಷಮತೆ. ಕೈಗಳಲ್ಲಿರುವ ಎಲ್ಲಾ ಕಸ ಹಾಗೂ ಕಿಟಗಳನ್ನು ತೆಗೆದು ಹಾಕುವ ಕ್ಷಮತೆಯನ್ನು ಕ್ಲೆನ್ಸರ್ ಹೊಂದಿರಬೇಕು. ಸೋಂಕುಗಳು ಬಹಳಷ್ಟು ಬಾರಿ ಕೈಗಳ ಮೂಲಕ ಹಬ್ಬುತ್ತವೆ. ಮುಖ, ಕಣ್ಣುಗಳು, ಮೂಗು ಹಾಗೂ ಬಾಯಿಗಳನ್ನು ಕೈಗಳಿಂದ ಮುಟ್ಟಿದಾಗ ಕೀಟಾಣುಗಳು ನಿಮ್ಮ ದೇಹದೊಳಗೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ.
ಪರಿಮಳ
ಹ್ಯಾಂಡ್‌ವಾಶ್‌ಗಳ ಪರಿಮಳವೂ ಬಹಳ ಮುಖ್ಯವಾದ ಅಂಶವಾಗಿದ್ದು, ನಮ್ಮ ಮೂಡ್ ಮೇಲೆ ಪರಿಣಾಮ ಬೀರಬಲ್ಲದಾಗಿದೆ. ಕೆಟ್ಟ ವಾಸನೆಯಿಂದ ಅನೇಕ ಬಾರಿ ಕೆಟ್ಟ ಮೂಡ್ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ, ನಿಮ್ಮ ಹ್ಯಾಂಡ್‌ವಾಶ್ ಹಣ್ಣು, ಹೂವು ಅಥವಾ ತೈಲಾಧರಿತ ಅಂಶಗಳಿಂದ ಮಾಡಲ್ಪಟ್ಟಿದೆ ಎಂದು ಖಾತ್ರಿ ಪಡಿಸಿಕೊಳ್ಳಿ.
ಪೋಷಣೆ
ಚಳಿಗಾಲದಲ್ಲಿ ನಿಮ್ಮ ಚರ್ಮ ಶುಷ್ಕಗೊಳ್ಳುವ ಕಾರಣ, ತೇವಾಂಶದ ಪೋಷಣೆ ಮಾಡಬಲ್ಲ ಸೂತ್ರದಿಂದ ತಯಾರಿಸಿದ ಹ್ಯಾಂಡ್‌ವಾಶ್ ಆಯ್ಕೆ ಮಾಡಿಕೊಳ್ಳಿ. ಉತ್ತಮ ಅಂಶಗಳಿಂದ ಮಾಡಲ್ಪಟ್ಟ ಹ್ಯಾಂಡ್‌ವಾಶ್ ನಿಮ್ಮ ಕೈಗಳಲ್ಲಿ ನೊರೆ ಬರಿಸುವುದರಿಂದ ಹಿಡಿದು, ಅದರ ಸುವಾಸನೆ ಪಸರಿಸುವವರೆಗೂ ನಿಮ್ಮ ಮೂಡ್‌ಅನ್ನು ಬೇರೆಡೆ ಕೊಂಡೊಯ್ಯಬಲ್ಲದು.