alex Certify ಈ ವಿಧಾನದಲ್ಲಿ ಕಿವಿ ಸ್ವಚ್ಛಗೊಳಿಸುತ್ತಿದ್ದರೆ ತಪ್ಪಿದ್ದಲ್ಲ ಅಪಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಧಾನದಲ್ಲಿ ಕಿವಿ ಸ್ವಚ್ಛಗೊಳಿಸುತ್ತಿದ್ದರೆ ತಪ್ಪಿದ್ದಲ್ಲ ಅಪಾಯ

ಶರೀರದ ಕೆಲವು ಅಂಗಗಳು ತುಂಬ ಸೂಕ್ಷ್ಮವಾಗಿರುತ್ತವೆ. ಅವನ್ನು ಸ್ವಚ್ಛಗೊಳಿಸುವಲ್ಲಿ ನಾವು ತುಂಬ ಕಾಳಜಿ ವಹಿಸಬೇಕು. ಅಂತಹ ಒಂದು ಅಂಗ ಕಿವಿ. ಕಿವಿಯಲ್ಲಿರುವ ಕುಗ್ಗಿಯನ್ನು ಜನ ಹೇಗ್ಹೇಗೋ ತೆಗೆಯುತ್ತಾರೆ. ಅದು ಸರಿಯಲ್ಲ. ಏಕೆಂದರೆ ನೀವು ಕುಗ್ಗಿ ತೆಗೆಯುವಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಾಯ ತಪ್ಪಿದ್ದಲ್ಲ.

ಕಿವಿಯ ಕುಗ್ಗಿ ಬೆವರು, ಧೂಳು ಮತ್ತು  ಸತ್ತ ಜೀವಕೋಶಗಳಿಂದ ಉಂಟಾಗುತ್ತದೆ. ಒಂದು ರೀತಿಯಲ್ಲಿ ಇದು ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಒಳಗೆ ಹೋಗದಂತೆ ಕಿವಿಗೆ ರಕ್ಷಣೆ ಒದಗಿಸುತ್ತದೆ. ಆದರೂ ಇದರ ಪ್ರಮಾಣ ಅಧಿಕವಾದಲ್ಲಿ ಕಿವಿ ಕೇಳದೇ ಇರುವುದು, ಕಿವಿ ನೋವು ಮತ್ತು ಇನ್ಫೆಕ್ಷನ್ ಆಗಬಹುದು. ಸಾಮಾನ್ಯವಾಗಿ ಜನರು ಕಿವಿಯ ವ್ಯಾಕ್ಸ್  ಹೊರತೆಗೆಯಲು ಇಯರ್ ಬಡ್ಸ್ ಬಳಸುತ್ತಾರೆ. ಅಮೆರಿಕದ ಗಂಟಲು, ಕಿವಿ, ಮೂಗಿನ ತಜ್ಞರಾದ ಜೆರಿ ಲಿನ್, ಈ ರೀತಿ ಇಯರ್ ಬಡ್ ಬಳಸುವುದು ತೀರ ಅಪಾಯಕರ ಎಂದು ಹೇಳಿದ್ದಾರೆ.

ಜೆರಿ ಪ್ರಕಾರ, ಇಯರ್ ಬಡ್ಸ್ ಸಹಾಯದಿಂದ ಕಿವಿಯ ಹೊರಭಾಗದ ವ್ಯಾಕ್ಸ್  ತೆಗೆಯಬೇಕೇ ಹೊರತು ಬಡ್ಸ್ ಕಿವಿಯ ಒಳಗಡೆ ಹಾಕಬಾರದು. ಇದರಿಂದ ಕಿವಿಯ ಕ್ಯಾನಲ್ ಗೆ ಮತ್ತು ಕಿವಿಯ ಪರದೆಗೆ ಹಾನಿಯಾಗಬಹುದು. ಇದರ ಹೊರತಾಗಿ ಈಯರ್ ಕ್ಯಾಂಡಲಿಂಗ್ ಕೂಡ ಪ್ರಯತ್ನಿಸಬಾರದು. ಇದರಲ್ಲಿ ಬಿಸಿ ಮೇಣವನ್ನು ಕಿವಿಯ ಒಳಗಡೆ ಬಿಡುತ್ತಾರೆ. ಈ ವಿಧಾನದಲ್ಲಿ ಕಿವಿಯನ್ನು ಸ್ವಚ್ಛಗೊಳಿಸುವುದು ಕೂಡ ಅಪಾಯಕಾರಿ.

ಕಿವಿ ಸ್ವಚ್ಛಗೊಳಿಸುವ ಹೊಸ ವಿಧಾನ

ಜೆರಿ ಲಿನ್, ಕಿವಿ ಕುಗ್ಗಿಯನ್ನು ತೆಗೆಯುವ ಸುಲಭ ವಿಧಾನ ಇಯರ್ ಡ್ರಾಪ್ ಎಂದು ಹೇಳುತ್ತಾರೆ. ಈ ತರಹದ ಲಿಕ್ವಿಡ್ ನಿಂದ ಕಿವಿಯ ಕುಗ್ಗಿ ತೆಳುವಾಗಿ ಸುಲಭವಾಗಿ ಹೊರ ಬರುತ್ತದೆ. 2018ರ ಒಂದು ಅಧ್ಯಯನದ ಪ್ರಕಾರ, 5 ದಿನಗಳ ಕಾಲ ಇಯರ್ ಡ್ರಾಪ್ಸ್ ಹಾಕುವುದರಿಂದ ಕಿವಿ ಪೂರ್ತಿಯಾಗಿ ಸ್ವಚ್ಛವಾಗುತ್ತದೆ. ಕುಗ್ಗಿಯನ್ನು ತೆಗೆಯುವುದಕ್ಕಾಗಿ ಯಾವುದೇ ವಸ್ತುವನ್ನು ಬಳಸಬೇಕಾಗಿಲ್ಲ. ಆದರೆ ಇಂತಹ ಡ್ರಾಪ್ಸ್ ಗಳನ್ನು ಬಳಸುವಾಗ ಒಮ್ಮೆ ವೈದ್ಯರ ಸಲಹೆ ಪಡೆದುಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...