ದಿನಕ್ಕೊಂದು ಸೇಬು ತಿನ್ನಿ ವೈದ್ಯರಿಂದ ದೂರವಿರಿ ಅನ್ನೋದು ಸಾಮಾನ್ಯ ಮಾತು. ಆದರೆ ಸೇಬು ಹಣ್ಣಿಗಿಂತ ಮೊಟ್ಟೆ ಅತ್ಯುತ್ತಮ ಎಂದು ಸಾಬೀತಾಗಿದೆ. ಮೊಟ್ಟೆಯಲ್ಲಿ ಕಬ್ಬಿಣಾಂಶ, ಸತು, ವಿಟಾಮಿನ್ ಇ ಅಂಶ ಹೆಚ್ಚಿರುವುದರಿಂದ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು.
ವಿಶ್ವದ ಪೌಷ್ಟಿಕ ಆಹಾರಗಳಲ್ಲಿ ಒಂದಾದ ಬೇಯಿಸಿದ ಮೊಟ್ಟೆಯು ದೇಹದ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಮೂಳೆಗಳನ್ನು ಬಲಪಡಿಸುವುದಷ್ಟೇ ಅಲ್ಲದೆ ದೃಷ್ಟಿ ಹೆಚ್ಚಿಸುತ್ತದೆ. ಹಿಮೋಗ್ಲೋಬಿನ್ ಮಟ್ಟದ ಸಮತೋಲನ ಹಾಗೂ ತೂಕ ನಿಯಂತ್ರಣಕ್ಕೆ ಸಹಕಾರಿ.
ಮೊಟ್ಟೆ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹಲವು ಅಧ್ಯಯನಗಳಲ್ಲಿ ಸಾಬೀತಾಗಿದೆ. ಬೇಯಿಸಿದ ಮೊಟ್ಟೆಯನ್ನು ಬೆಳಿಗ್ಗೆ ತಿಂಡಿ ಜೊತೆ ತಿನ್ನುವುದು ಹೆಚ್ಚು ಪ್ರಯೋಜನಕಾರಿ.
ಪ್ರತಿದಿನ ಎರಡು ಮೊಟ್ಟೆಗಳನ್ನು ತಿಂದರೆ, ರಕ್ತದಲ್ಲಿರುವ ರಕ್ತಕಣಗಳು ಬಲಗೊಳ್ಳುತ್ತವೆ. ಮೊಟ್ಟೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯವರ್ದಕವೂ ಹೌದು. ಹಸಿಮೊಟ್ಟೆಯನ್ನು ಕೂದಲಿಗೆ ಹಚ್ಚಿಕೊಳ್ಳುವುದರಿಂದ ಕೂದಲು ಹೊಳಪು ಪಡೆದು, ಕಾಂತಿಯುಕ್ತವಾಗುತ್ತದೆ.