ಮನೆಗೆ ಬೆಕ್ಕು ಬಂದು ಈ ರೀತಿ ಮಾಡಿದ್ರೆ ಅಶುಭ ಸಕೇತ

ಅನೇಕ ಜನರು ಶಕುನ-ಅಪಶಕುನವನ್ನು ನಂಬ್ತಾರೆ. ಒಂದು ಸೀನ್ ಸೀನಿದ್ರೆ, ಹಿಂದಿನಿಂದ ಕೂಗಿದ್ರೆ ಅಪಶಕುನ ಎನ್ನಲಾಗುತ್ತದೆ. ಹಾಗೆ ಬೆಕ್ಕು ಅಡ್ಡ ಹೋದ್ರೆ ಅನೇಕರು ಅಲ್ಲಿ ಸ್ವಲ್ಪ ಹೊತ್ತು ನಿಂತು ಹೋಗ್ತಾರೆ.

ಮುಂದೆ ನಡೆಯುವ ಘಟನೆಗಳ ಬಗ್ಗೆ ಪ್ರಾಣಿಗಳಿಗೆ ಮೊದಲೇ ಸೂಚನೆ ಸಿಕ್ಕಿರುತ್ತದೆ. ಆಗಬಹುದಾದ ಅನಾಹುತಗಳ ಬಗ್ಗೆ ಅವು ಮುನ್ಸೂಚನೆ ನೀಡುತ್ತವೆ ಎಂದು ನಂಬಲಾಗಿದೆ.

 ರಾಹು ಗ್ರಹದ ವಾಹನ ಬೆಕ್ಕು. ಜಾತಕದಲ್ಲಿ ರಾಹು ಬಂದು ಕುಳಿತಾಗ ಅಪಘಾತ, ಪೆಟ್ಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಬೆಕ್ಕು ಅಡ್ಡ ಹೋಗಿ ಈ ಬಗ್ಗೆ ಮುನ್ಸೂಚನೆ ನೀಡುತ್ತದೆ.

ಬೆಕ್ಕು ಎಡ ಭಾಗದಿಂದ ಬಲ ಭಾಗಕ್ಕೆ ಹೋದ್ರೆ ಇದನ್ನು  ಅಶುಭವೆಂದು ಪರಿಗಣಿಸಲಾಗುತ್ತದೆ.

ಮನೆಗೆ ಬಂದು ಬೆಕ್ಕು ಅಳುತ್ತಿದ್ದರೆ ಇದು ಅಹಿತಕರ ಘಟನೆಯ ಸಂಕೇತ. ಮನೆಯಲ್ಲಿ ಎರಡು ಬೆಕ್ಕುಗಳು ಜಗಳವಾಡಿದಲ್ಲಿ ಆರ್ಥಿಕ ನಷ್ಟದ ಜೊತೆಗೆ ಜಗಳವಾಗುತ್ತದೆ ಎಂದರ್ಥ.

ದೀಪಾವಳಿಯಂದು ಬೆಕ್ಕು ಮನೆಗೆ ಬಂದ್ರೆ ಅದು ಶುಭ. ವರ್ಷವಿಡಿ ಲಕ್ಷ್ಮಿ ಮನೆಯಲ್ಲಿ ನೆಲೆಸಿರುತ್ತಾಳೆ.

ಮಲಗಿರುವ ವ್ಯಕ್ತಿಯ ತಲೆಗೆ ಬೆಕ್ಕಿನ ದೇಹ ತಾಕಿದ್ರೆ ಸರ್ಕಾರಿ ಗಲಾಟೆಯಲ್ಲಿ ಸಿಲುಕಬೇಕಾಗುತ್ತದೆ. ಕಾಲಿಗೆ ತಾಕಿದ್ರೆ ರೋಗ ಬರಲಿದೆ. ಮಲಗಿರುವ ವ್ಯಕ್ತಿಯನ್ನು ಜಿಗಿದು ಹೋದ್ರೆ ಭವಿಷ್ಯದಲ್ಲಿ ತೊಂದರೆಯಾಗಲಿದೆ.

ಮನೆಯಲ್ಲಿರುವ ಹಾಲನ್ನು ಬೆಕ್ಕು ಕದ್ದು ಕುಡಿದ್ರೆ ಮನೆಯಲ್ಲಿಟ್ಟಿರುವ ಹಣ ನೀರಿನಂತೆ ಹರಿದು ಹೋಗಲಿದೆ ಎಂದರ್ಥ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read