ಬ್ಯಾಂಕ್ ನಲ್ಲಿ ಖಾತೆ ಹೊಂದಿದ ಅನೇಕರು ಕ್ರೆಡಿಟ್ ಕಾರ್ಡ್ ಬಳಸುತ್ತಾರೆ. ಇದು ವಹಿವಾಟನ್ನು ಸುಲಭಗೊಳಿಸುತ್ತದೆ. ಕ್ರೆಡಿಟ್ ಕಾರ್ಡ್ ನಲ್ಲಿ ಮುಕ್ತಾಯದ ದಿನಾಂಕವನ್ನು ನಮೂದಿಸಲಾಗಿರುತ್ತದೆ. ಅದು ಏನು ? ಹಾಗೆ ಮುಕ್ತಾಯದ ದಿನ ಮುಗಿದ ಮೇಲೆ ಏನು ಮಾಡಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ಇದ್ರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ರೆಡಿಟ್ ಕಾರ್ಡ್ ಗೆ ಮುಕ್ತಾಯದ ಅವಧಿಯಿರುತ್ತದೆ. ಮುಕ್ತಾಯದ ಅವಧಿ ನಂತ್ರ ಈ ಕಾರ್ಡ್ ನಲ್ಲಿ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಆದ್ರೆ ಗ್ರಾಹಕರು ಬಯಸಿದ್ರೆ ಬೇರೆ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಇದಕ್ಕೆ ಗ್ರಾಹಕರು ಅರ್ಜಿ ಸಲ್ಲಿಸಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ದಿನಾಂಕ ಮುಗಿಯುವ ಮೊದಲೇ ಇನ್ನೊಂದು ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅವಧಿ ಮುಗಿದ ನಂತ್ರ, ಕ್ರೆಡಿಟ್ ಕಾರ್ಡ್ ನವೀಕರಣ ಸಾಧ್ಯವಾಗುವುದಿಲ್ಲ. ಬ್ಯಾಂಕ್ ಶಾಖೆಗೆ ಹೋಗಿ ಅರ್ಜಿ ಸಲ್ಲಿಸಬೇಕು. ಕೆಲ ಬ್ಯಾಂಕ್ ಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅವಕಾಶ ನೀಡ್ತಿವೆ.
ಮನೆಯಲ್ಲೇ ಕುಳಿತು ಹೊಸ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು. ನಿಮ್ಮ ಖಾತೆ ವಿಳಾಸಕ್ಕೆ ಹೊಸ ಕ್ರೆಡಿಟ್ ಕಾರ್ಡ್ ಬರುತ್ತದೆ. ಒಂದು ವೇಳೆ ವಿಳಾಸ ಬದಲಿಸಿದ್ದರೆ ಅವಶ್ಯಕವಾಗಿ ಬ್ಯಾಂಕ್ ಗೆ ಮಾಹಿತಿ ನೀಡಬೇಕಾಗುತ್ತದೆ. ಹೊಸ ಕ್ರೆಡಿಟ್ ಕಾರ್ಡ್ ನಲ್ಲಿ ಸಿವಿಸಿ ಕೂಡ ಬದಲಾಗಿರುತ್ತದೆ. ಗ್ರಾಹಕರು ಡಿಜಿಟಲ್ ಕ್ರೆಡಿಟ್ ಕಾರ್ಡ್ ಕೂಡ ಪಡೆಯಬಹುದಾಗಿದೆ.