ಆರೋಗ್ಯಕರ ಪಥ್ಯ ಹಾಗೂ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಸಹ ದೀರ್ಘಾಯುಷ್ಯಕ್ಕೆ ಪ್ರಮುಖವಾಗಿದೆ. ನೀವು ಮನದುಂಬಿ ನಕ್ಕಷ್ಟೂ ದೀರ್ಘಾಯುಷಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನಗಳು ತೋರುತ್ತವೆ.
2. ಕೆಟ್ಟ ಮೂಡ್‌ಗೆ ಗುಡ್‌ಬೈ ಹೇಳಿ
ಒತ್ತಡವನ್ನು ಕಡಿಮೆ ಮಾಡಿ ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸಲು ನಗುವು ಅತ್ಯುತ್ತಮ ಮಾರ್ಗವಾಗಿದೆ. ನೀವೇನಾದರೂ ಬಿಡುವಿಲ್ಲದ ಕಾರ್ಯದಲ್ಲಿದ್ದರೆ ಸ್ವಲ್ಪ ಬ್ರೇಕ್ ತೆಗೆದುಕೊಂಡು ಹಾಗೇ ಒಮ್ಮೆ ನಕ್ಕುಬಿಡಿ, ಇದರಿಂದ ನಿಮ್ಮಲ್ಲಿರುವ ಆಯಾಸದ ಭಾವ ಹೋಗಿ ಹೊಸ ಚೈತನ್ಯ ಬರಬಹುದು.
3. ಇನ್ನಷ್ಟು ಆಪ್ತತೆ ಬೆಸೆಯಲು
ಸಂತಸದಿಂದ ಇರುವ ವ್ಯಕ್ತಿಯನ್ನು ಯಾರು ತಾನೇ ಇಷ್ಟ ಪಡೋದಿಲ್ಲ ? ನಗುವಿನಿಂದ ಒಬ್ಬ ವ್ಯಕ್ತಿಯು ತನ್ನ ಸುತ್ತಲಿನ ಮಂದಿಯಲ್ಲಿ ಸಕಾರಾತ್ಮಕ ಭಾವ ತುಂಬಬಲ್ಲ. ವಿಶ್ವಾಸಭರಿತ ನಗೆಯು ನಿಮ್ಮ ಸಾಮಾಜಿಕ ಕೌಶಲ್ಯ ವರ್ಧಿಸಿ ಜನರೊಂದಿಗೆ ಇನ್ನಷ್ಟು ಉತ್ತಮವಾಗಿ ಸಂಪರ್ಕದಿಂದಿರಲು ನೆರವಾಗಬಲ್ಲದು.
4. ರಕ್ತದೊತ್ತಡ ನಿಯಂತ್ರಣಕ್ಕೆ
ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ನಗು ನೆರವಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಇದರಿಂದ ಹೃದಯದ ಆರೋಗ್ಯಕ್ಕೆ ಸಕಾರಾತ್ಮಕ ಪರಿಣಾಮಗಳು ಆಗಲಿದೆ.
5. ರೋಗ ನಿರೋಧಕ ಶಕ್ತಿ ವರ್ಧನೆ
ಆರೋಗ್ಯಕರ ದೈಹಿಕ ಕ್ಷಮತೆಗಾಗಿ ಮಾನಸಿಕ ಸ್ವಾಸ್ಥ್ಯದ ಪಾತ್ರದ ಮಹತ್ವದ ಬಗ್ಗೆ ಎಲ್ಲೆಡೆ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ನಾವು ಸದಾ ಹಸನ್ಮುಖಿಯಾಗಿದ್ದಷ್ಟು ರೋಗ ನಿರೋಧಕ ಶಕ್ತಿ ವರ್ಧನೆಯಾಗಿ ದೇಹ ಬಲಿಷ್ಠವಾಗಲು ನೆರವಾಗುತ್ತದೆ.