ಈಗ ಪ್ರತಿಯೊಬ್ಬರ ಕೈನಲ್ಲೂ ಸ್ಮಾರ್ಟ್ಫೋನ್ ಇರುತ್ತೆ. ಆದ್ರೆ ಸ್ಮಾರ್ಟ್ಫೋನ್ ಬಳಕೆ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಕೆಲವೊಮ್ಮೆ ನಾವು ಮಾಡುವ ತಪ್ಪಿನಿಂದ ಸ್ಮಾರ್ಟ್ಫೋನ್ ಸ್ಫೋಟಗೊಳ್ಳುತ್ತದೆ.
ಸ್ಮಾರ್ಟ್ಫೋನ್ ಅತಿಯಾದ ಬಳಕೆಯಿಂದ ಬ್ಯಾಟರಿ ಬಿಸಿಯಾಗುತ್ತದೆ ಮತ್ತು ಸ್ಫೋಟಗೊಳ್ಳುತ್ತದೆ. ಗ್ರಾಹಕರು ಮಾಡುವ ಕೆಲ ತಪ್ಪುಗಳು ಸ್ಮಾರ್ಟ್ಫೋನ್ ಸ್ಫೋಟಕ್ಕೆ ಕಾರಣವಾಗುತ್ತದೆ.
ಫೋನ್ ಕೆಳಗೆ ಬಿದ್ದು ಹಾಳಾಗುತ್ತದೆ. ಫೋನ್ ಕೆಳಗೆ ಬಿದ್ದ ತಕ್ಷಣ ಅದನ್ನು ಬಳಸಬಾರದು. ಮೊದಲು ಅಂಗಡಿಗೆ ಹೋಗಿ ಚೆಕ್ ಮಾಡಬೇಕು. ಫೋನ್ ಸ್ಕ್ರೀನ್ ಒಡೆದಿದ್ದರೆ ಅಥವಾ ನೀರು ಸೇರಿದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಬ್ಯಾಟರಿ ಹಾಳಾಗುತ್ತದೆ.
ಹಾಗೆ ವೇಗದ ಚಾರ್ಜಿಂಗ್ ಅಡಾಪ್ಟರ್ ಗಳನ್ನು ಬಳಸಬೇಡಿ. ಸಾಮಾನ್ಯವಾಗಿ ಬಳಕೆದಾರರು ವೇಗದ ಚಾರ್ಜಿಂಗ್ ಗಾಗಿ ವೇಗದ ಚಾರ್ಜಿಂಗ್ ಅಡಾಪ್ಟರುಗಳನ್ನು ಖರೀದಿಸುತ್ತಾರೆ. ಇದು ಬ್ಯಾಟರಿಯ ಮೇಲೆ ಹೆಚ್ಚಿನ ಒತ್ತಡ ಹಾಕುತ್ತದೆ. ನಕಲಿ ಚಾರ್ಜರ್ ಕೂಡ ಬಳಸಬಾರದು.
ಫೋನ್ ಗೆ ನಕಲಿ ಬ್ಯಾಟರಿ ಅಳವಡಿಸಬೇಡಿ. ನಕಲಿ ಲಿಥಿಯಂ-ಐಯಾನ್ ಬ್ಯಾಟರಿಯು ಹೆಚ್ಚು ಬಿಸಿಯಾಗುತ್ತದೆ. ಇದರಿಂದಾಗಿ ಫೋನ್ ಗೆ ಬೆಂಕಿ ಹತ್ತಿಕೊಳ್ಳುವ ಅಥವಾ ಸ್ಫೋಟಗೊಳ್ಳುವ ಅಪಾಯವಿರುತ್ತದೆ.
ಅನೇಕ ಬಾರಿ ಫೋನ್ ಬಿಸಿಯಾಗುತ್ತದೆ. ತಕ್ಷಣ ಅದನ್ನು ಚಾರ್ಜ್ ಮಾಡಬೇಡಿ. ಫೋನ್ ಬಳಕೆಯನ್ನೂ ಮಾಡಬೇಡಿ. ಸ್ವಲ್ಪ ಹೊತ್ತು ಫೋನನ್ನು ಬದಿಗಿಡಿ.
ಪ್ರಯಾಣದ ಸಮಯದಲ್ಲಿ ಹೆಚ್ಚಿನ ಜನರು ಕಾರ್ ಚಾರ್ಜರ್ ಬಳಸುತ್ತಾರೆ, ಇದು ಅಪಾಯಕಾರಿ. ಹೆಚ್ಚಿನ ಕಂಪನಿಗಳು ಚಾರ್ಜಿಂಗ್ ಪಾಯಿಂಟ್ಗಳಿಗಾಗಿ ಮೂರನೇ ವ್ಯಕ್ತಿಯ ಮಾರಾಟಗಾರರನ್ನು ನೇಮಿಸಿಕೊಳ್ಳುತ್ತವೆ. ಇದು ಮೊಬೈಲ್ ಬ್ಯಾಟರಿ ಹಾಳಾಗಲು ಕಾರಣವಾಗುತ್ತದೆ.
ಹೆಚ್ಚಿನ ಜನರು ಫೋನ್ ಫುಲ್ ಚಾರ್ಜ್ ಆದ್ಮೇಲೂ ದೀರ್ಘಕಾಲದವರೆಗೆ ಚಾರ್ಜ್ ಮಾಡುತ್ತಾರೆ.
ಫೋನ್ ಚಾರ್ಜ್ ಮಾಡುವಾಗ, ಹೊಗೆ ಬರಬಾರದು. ಫೋನ್ ಚಾರ್ಜ್ ಮಾಡುವಾಗ ಅದನ್ನು ಸೂರ್ಯನ ಬೆಳಕು ಅಥವಾ ಯಾವುದೇ ಬಿಸಿ ವಸ್ತುಗಳಿಂದ ದೂರವಿಡಬೇಕು.
ಫೋನ್ ಚಾರ್ಜ್ ಮಾಡುವಾಗ, ಒತ್ತಡ ಹೇರಬೇಡಿ. ಚಾರ್ಜ್ ಮಾಡುವಾಗಲೂ ಜನರು ಫೋನ್ ಬಳಸುತ್ತಾರೆ. ಇದು ಅಪಾಯಕಾರಿ.