ಬೇಕಾಗುವ ಸಾಮಾಗ್ರಿಗಳು:
ಮೈದಾ – 1 ಕಪ್, ಕಾಯಿತುರಿ – 3/4 ಕಪ್, ಬಾಂಬೆ ರವಾ – ಅರ್ಧ ಕಪ್, ಕಡಲೇಹಿಟ್ಟು – 3 ಟೀ ಸ್ಪೂನ್, ಖಾರದ ಪುಡಿ – ಸ್ವಲ್ಪ, ಅರಶಿನ – ಸ್ವಲ್ಪ, ಉಪ್ಪು, ಕರಿಯಲು ಎಣ್ಣೆ, ಉದ್ದಿನ ಕಾಳು – ಸ್ವಲ್ಪ, ಸಾಸಿವೆ – ಸ್ವಲ್ಪ, ಕರಿಬೇವುಸೊಪ್ಪು, ಇಂಗು – ಚಿಟಿಕೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಒಂದು ಕಪ್ ಮೈದಾಗೆ ಸ್ವಲ್ಪ ಉಪ್ಪು, ಖಾರದ ಪುಡಿ ಹಾಕಿ. ನಂತರ 2 ಟೀ. ಚಮಚ ಬಿಸಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿ ಗಟ್ಟಿಯಾದ ಹಿಟ್ಟು ತಯಾರಿಸಿ ಚೆನ್ನಾಗಿ ನಾದಿ, 10 ನಿಮಿಷ ಮುಚ್ಚಿಟ್ಟು ಬಿಡಿ. ನಂತರ ಒಂದು ಬಾಣಲೆಯಲ್ಲಿ 2 ಟೀ ಸ್ಪೂನ್ ಎಣ್ಣೆ ಹಾಕಿ, ನಂತರ ಸಾಸಿವೆ, ಉದ್ದಿನಕಾಳು, ಕರಿಬೇವುಸೊಪ್ಪು, ಚಿಟಿಕೆಯಷ್ಟು ಇಂಗು ಹಾಕಿ. ನಂತರ ಇದಕ್ಕೆ ಕಡಲೇಹಿಟ್ಟು, ಬಾಬೆ ರವಾ ಹಾಕಿ ಫ್ರೈ ಮಾಡಿ. ಬಳಿಕ ತೆಂಗಿನಕಾಯಿತುರಿ ಹಾಕಿ. ನಂತರ ಸ್ವಲ್ಪ ಖಾರದ ಪುಡಿ, ಅರಶಿನ ಪುಡಿ ಹಾಕಿ ಮಿಕ್ಸ್ ಮಾಡಿ.
ನಂತರ ಇದನ್ನು ತಣ್ಣಗಾಗಲು ಬಿಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ಉಂಡೆ ಮಾಡಿಟ್ಟುಕೊಳ್ಳಿ. ಮೈದಾ ಹಿಟ್ಟಿನ ಮಿಶ್ರಣವನ್ನು ಚಿಕ್ಕದಾಗಿ ಲಟ್ಟಿಸಿ, ಮಾಡಿಟ್ಟ ಉಂಡೆಯನ್ನು ಇದರ ಮಧ್ಯಕ್ಕೆ ಇಡಿ. ನಂತರ ಪೂರಿ ತರಹ ಲಟ್ಟಿಸಿ ಬಿಸಿ ಎಣ್ಣೆಯಲ್ಲಿ ಫ್ರೈ ಮಾಡಿದರೆ ಸವಿಯಲು ರುಚಿಯಾದ ಬಿಸ್ಕೂಟ್ ರೊಟ್ಟಿ ರೆಡಿ.