ಸಕಾರಾತ್ಮಕ ಶಕ್ತಿ ವೃದ್ದಿಸಬೇಕೆಂದ್ರೆ ಈ ವಸ್ತುಗಳನ್ನು ದೇವರ ಮನೆಯಲ್ಲಿಡಬೇಡಿ

ವೈಷ್ಣವರ ಮನೆಯಲ್ಲಿ ಬೆಳಿಗ್ಗೆ ದೇವರ ಪೂಜೆ ನಂತ್ರವೇ ದಿನ ಆರಂಭವಾಗುತ್ತದೆ. ಪೂಜೆ-ಪುನಸ್ಕಾರವನ್ನು ಭಕ್ತಿಯಿಂದ ಮಾಡಲಾಗುತ್ತದೆ. ದೇವರ ಮನೆಗೆ ಅದರದೇ ಆದ ಮಹತ್ವದ ಸ್ಥಾನವಿದೆ. ದೇವರ ಪೂಜೆಗಾಗಿ ಅನೇಕ ಸಾಮಗ್ರಿಗಳನ್ನು ಬಳಸಲಾಗುತ್ತದೆ. ಆದ್ರೆ ಕೆಲವೊಂದು ವಸ್ತುಗಳು ದೇವರ ಮನೆಯಲ್ಲಿದ್ದರೆ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ.

ಸಾಮಾನ್ಯವಾಗಿ ವರ್ಣರಂಜಿತ ಹೂವುಗಳಿಂದ ದೇವರ ಮನೆಯನ್ನು ಅಲಂಕಾರ ಮಾಡಲಾಗುತ್ತದೆ. ದೇವರ ಮನೆ ಸುವಾಸನೆಯಿಂದ ಕೂಡಿರುತ್ತದೆ. ಅನೇಕ ಬಾರಿ ದೇವರಿಗೆ ಹಾಕುವ ಹೂವನ್ನು ಹೊರಗೆಸೆಯದೇ ದೇವರ ಮನೆಯಲ್ಲಿಯೇ ಇಡುತ್ತೇವೆ. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ಅಕಾಲಮೃತ್ಯು, ಮಂಗಲದೋಷ, ಮದುವೆ ವಿವಾದ, ರೋಗಗಳಿಗೆ ಕಾರಣವಾಗುತ್ತದೆ.

ಮನೆಯಲ್ಲಿ ಯಾವುದೋ ದುರ್ಘಟನೆ, ಅಶುಭ ಘಟನೆ ನಡೆಯಲಿದೆ ಎನ್ನುವ ಮುನ್ಸೂಚನೆಯನ್ನು ತುಳಸಿ ನೀಡುತ್ತದೆ. ಮನೆ ಮುಂದೆ ನೆಟ್ಟ ತುಳಸಿ ಗಿಡ ಬಾಡುತ್ತ ಬಂದಲ್ಲಿ ಮನೆಗೆ ಅಶುಭವಾಗಲಿದೆ ಎಂದರ್ಥ.

ತುಪ್ಪದ ದೀಪವನ್ನು ದೇವರ ಮನೆಯಲ್ಲಿ ಪ್ರತಿನಿತ್ಯ ಬೆಳಗಬೇಕು. ಎರಡು ಬತ್ತಿಯ ದೀಪವನ್ನು ಬೆಳಗಬೇಕು. ಒಂದು ಬತ್ತಿ ಪೂರ್ವಕ್ಕೆ ಹಾಗೂ ಇನ್ನೊಂದು ಪಶ್ಚಿಮ ಮುಖಕ್ಕಿರಬೇಕು. ಪೂರ್ವ ದಿಕ್ಕಿಗೆ ಮುಖ ಮಾಡಿ ಪೂಜೆ ಮಾಡಿ. ಒಡೆದ ದೀಪವನ್ನು ಮನೆಯಲ್ಲಿ ಬಳಸಬಾರದು.

ದೇವರ ಮನೆಯಲ್ಲಿ ಯಾವುದೇ ದೇವರ ಮೂರ್ತಿಯನ್ನು ಸ್ಥಾಪನೆ ಮಾಡಬಾರದು. ಚಿತ್ತಪಟ ಅಥವಾ ಸಣ್ಣ ಪ್ರತಿಮೆಗೆ ಪೂಜೆ ಮಾಡಬೇಕು. ದೇವರ ಮನೆಯಲ್ಲಿ ಭಿನ್ನಗೊಂಡ ಯಾವುದೇ ಮೂರ್ತಿಗಳನ್ನು ಇಡಬಾರದು. ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕಿಗೆ ಮುಖವಿರಬೇಕು.

ಅಮೂಲ್ಯವಾದ ವಸ್ತುಗಳನ್ನು ದೇವರ ಮನೆಯಲ್ಲಿ ಬಚ್ಚಿಡಬಾರದು. ದೇವರಿಗೆ ಹಾಕಿದ ಹಾರವನ್ನು ಮರುದಿನ ತೆಗೆಯಬೇಕು. ಹಾಗೆ ಹೊಸ ಹಾರವನ್ನು ಹಾಕಬೇಕು.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read