alex Certify ಅಚ್ಚರಿಯಾದ್ರೂ ಇದು ನಿಜ: ಈ ದೇಗುಲದಲ್ಲಿ ಪ್ರಸಾದದ ರೂಪದಲ್ಲಿ ವಿತರಣೆಯಾಗುತ್ತೆ ನೂಡಲ್ಸ್​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಯಾದ್ರೂ ಇದು ನಿಜ: ಈ ದೇಗುಲದಲ್ಲಿ ಪ್ರಸಾದದ ರೂಪದಲ್ಲಿ ವಿತರಣೆಯಾಗುತ್ತೆ ನೂಡಲ್ಸ್​…..!

ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲಿ ವಿವಿಧ ತಿಂಡಿ ತಿನಿಸುಗಳನ್ನು ನೀಡೋದು ಸರ್ವೇ ಸಾಮಾನ್ಯ. ಆದರೆ ಯಾವುದಾದರೂ ದೇವಸ್ಥಾನದಲ್ಲಿ ನ್ಯೂಡಲ್ಸ್​ನ್ನು ಪ್ರಸಾದ ರೂಪದಲ್ಲಿ ನೀಡಿದ್ದನ್ನು ನೋಡಿದ್ದೀರೇ..? ಇಲ್ಲ ಎಂದಾದಲ್ಲಿ ನೀವು ಈ ಸ್ಟೋರಿಯನ್ನು ಓದಲೇಬೇಕು.

ಕೋಲ್ಕತ್ತಾದ ಕಾಳಿ ದೇಗುಲದಲ್ಲಿ ನ್ಯೂಡಲ್ಸ್​​ನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ. ಕೋಲ್ಕತ್ತಾದಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಇದರ ನಡುವೆ ಈ ದೇವಸ್ಥಾನವು ತನ್ನ ವಿಶಿಷ್ಟ ರೀತಿಯ ಪ್ರಸಾದ ವಿತರಣೆ ಮೂಲಕವೇ ಸುದ್ದಿ ಮಾಡುತ್ತಿದೆ. ಚೀನಾ ಟೌನ್​ ಎಂದೇ ಪ್ರಸಿದ್ಧಿ ಪಡೆದಿರುವ ಟಾಂಗ್ರಾ ಏರಿಯಾದಲ್ಲಿ ಈ ಚೈನೀಸ್​ ಕಾಳಿ ದೇಗುಲವಿದೆ. ಇಲ್ಲಿ ವಿಚಿತ್ರ ಅಂದರೆ ನ್ಯೂಡಲ್ಸ್​, ಚಾಪ್​ ಸ್ಯೂ, ಅನ್ನ ಹಾಗೂ ತರಕಾರಿಯ ಖಾದ್ಯಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.

ಬಂಗಾಳಿಗಳು ಕೂಡ ಈ ದೇಗುಲಕ್ಕೆ ಆಗಮಿಸ್ತಾರೆ ಹಾಗೂ ಕೈಯಲ್ಲೇ ಮಾಡಿದ ಕಾಗದವನ್ನು ಸುಡುವ ಮೂಲಕ ದುಷ್ಟ ಶಕ್ತಿಯನ್ನು ದೂರ ಇಡಲಾಗುತ್ತದೆ. ದೀಪಾವಳಿ ಸಂದರ್ಭದಲ್ಲಿ ಚೈನೀಸ್​ ಇನ್​ಸೆನ್ಸ್​ ಸ್ಟಿಕ್​ಗಳ ಮೂಲಕ ಮೇಣದಬತ್ತಿಯನ್ನು ಉರಿಸಲಾಗುತ್ತದೆ. ಅಲ್ಲದೇ ಈ ದೇಗುಲದ ಸುವಾಸನೆ ಕೂಡ ಇತರೆ ಹಿಂದೂ ದೇಗುಲಗಳ ಸುಗಂಧಕ್ಕಿಂತ ವಿಭಿನ್ನವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...