alex Certify ಸುಲಭವಾಗಿ ತೂಕ ಇಳಿಸಬೇಕೆಂದ್ರೆ ರಾತ್ರಿ ಮಲಗುವ ಮುನ್ನ ಸೇವಿಸಿ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ತೂಕ ಇಳಿಸಬೇಕೆಂದ್ರೆ ರಾತ್ರಿ ಮಲಗುವ ಮುನ್ನ ಸೇವಿಸಿ ಈ ಆಹಾರ

ನಮಗೆ ಇಷ್ಟವಿಲ್ಲವೆಂದ್ರೂ ತೂಕ ಏರುತ್ತೆ. ಆದ್ರೆ ಏರಿದ ತೂಕವನ್ನು ಇಳಿಸೋದು ಅಷ್ಟು ಸುಲಭವಲ್ಲ. ತೂಕ ಇಳಿಸಲು ಸಾಕಷ್ಟು ಕಸರತ್ತು ಮಾಡ್ಬೇಕು. ಅನೇಕ ಬಾರಿ ಎಷ್ಟೇ ಕಸರತ್ತು ಮಾಡಿದ್ರೂ ತೂಕ ಇಳಿಯುವುದಿಲ್ಲ. ಆರೋಗ್ಯ ತಜ್ಞರ ಪ್ರಕಾರ, ಸೌತೆಕಾಯಿ, ಮೆಂತ್ಯ ಮತ್ತು ಕ್ಯಾಮೊಮೈಲ್ ಚಹಾ ತೂಕ ಮತ್ತು ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಮೂರರ ಟೀಯನ್ನು ಸೇವಿಸುವುದರಿಂದ, ಕೆಲವು ತಿಂಗಳುಗಳಲ್ಲಿ ಸ್ಥೂಲಕಾಯ ಸಮಸ್ಯೆ ಕಡಿಮೆಯಾಗುತ್ತದೆ.

ತೂಕ ಇಳಿಸಲು ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವನ್ನು ಸೇವಿಸಬೇಕು. ಇದ್ರ ಜೊತೆ ಶಾಂತವಾದ ನಿದ್ರೆ ಅವಶ್ಯಕ. ಆಗ ಮಾತ್ರ ತೂಕ ಇಳಿಸುವ ಸಾಧ್ಯ.ತಡರಾತ್ರಿ ಮಲಗುವುದು ಹಾಗೂ ತಡವಾಗಿ ಏಳುವುದು ಕೂಡ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಹಾಗೆ ಪ್ರತಿ ದಿನ 7 ಗಂಟೆ ನಿದ್ರೆ ಅವಶ್ಯಕ.

ಕ್ಯಾಮೊಮೈಲ್ ಚಹಾವು ದೇಹದಲ್ಲಿ ಗ್ಲೈಸಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನರಗಳನ್ನು ಸಡಿಲಗೊಳಿಸುತ್ತದೆ.ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.ನೋವಿನ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ತೂಕ ಇಳಿಸಲು ಇದು ಪರಿಣಾಮಕಾರಿ.

ಸೌತೆಕಾಯಿ-ಪಾರ್ಸ್ಲಿ ರಸ ಕೂಡ ತೂಕ ಇಳಿಕೆಗೆ ನೆರವಾಗುತ್ತದೆ. ಇದನ್ನು ನಿಯಮಿತವಾಗಿ ಸೇವಿಸಿದರೆ, ಇದು ಕೊಬ್ಬನ್ನು ಕರಗಿಸುತ್ತದೆ. ಇದರಲ್ಲಿ ವಿಟಮಿನ್ ಎ, ಬಿ ಮತ್ತು ಕೆ ಯಂತಹ ಪೋಷಕಾಂಶಗಳಿವೆ. ಪಾರ್ಸ್ಲಿ ಗಿಡಮೂಲಿಕೆಯಂತೆ ಕಾರ್ಯನಿರ್ವಹಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಮತ್ತು ಜೀರ್ಣಕ್ರಿಯೆಯನ್ನು ಸರಿಗೊಳಿಸಲು ನೆರವಾಗುತ್ತದೆ.

ಮೆಂತ್ಯದ ನೀರು ಕೂಡ ತೂಕ ಇಳಿಸಲು ಸಹಾಯಕಾರಿ. ನೆನೆಸಿದ ಮೆಂತ್ಯ ಬೀಜಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ನೆರವಾಗುತ್ತದೆ. ಇದನ್ನು ಸಾಮಾನ್ಯವಾಗಿ ಬೆಳಿಗ್ಗೆ ಸೇವಿಸಲಾಗುತ್ತದೆ. ಆದರೆ ಇದನ್ನು ರಾತ್ರಿಯೂ ಸೇವಿಸಬಹುದು. ಇದರ ಬೀಜಗಳು ದೇಹದಲ್ಲಿ ಶಾಖವನ್ನು ಉತ್ಪತ್ತಿ ಮಾಡುತ್ತವೆ. ತೂಕ ಇಳಿಕೆಗೆ ನೆರವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...