ಈ ಬಾರಿ ಆಗಸ್ಟ್ 19ರಂದು ರಕ್ಷಾ ಬಂಧನ ಆಚರಿಸಲಾಗ್ತಿದೆ. ಸಹೋದರಿಯರು, ಸಹೋದರರಿಗೆ ರಾಖಿ ಕಟ್ಟಿ, ಆಶೀರ್ವಾದ ಪಡೆಯುತ್ತಾರೆ. ಸಹೋದರಿಯರು,ಸಹೋದರರಿಗೆ ರಾಖಿ ಕಟ್ಟುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದ್ರೆ ರಕ್ಷಾ ಬಂಧನದ ದಿನ ದೇವರಿಗೂ ರಾಖಿ ಕಟ್ಟಬೇಕು. ಇದ್ರಿಂದ ನಮಗೆ ಸದಾ ರಕ್ಷಣೆ ಸಿಗುತ್ತದೆ.
ಆದಿಯಲ್ಲಿ ಮೊದಲು ಪೂಜಿಸಲ್ಪಡುವ ದೇವರು ಗಣೇಶ. ವಿಘ್ನ ವಿನಾಶಕ ಗಣಪ. ಸಮಸ್ಯೆ ದೂರವಾಗಿ, ಮನೆಯಲ್ಲಿ ಸಂತೋಷ ನೆಲೆಸಲು ಕಾರಣನಾಗ್ತಾನೆ. ರಾಖಿ ದಿನದಂದು ಮೊದಲು ಗಣೇಶನಿಗೆ ರಾಖಿ ಕಟ್ಟಬೇಕು. ಗಣಪತಿಗೆ ಕೆಂಪು ಬಣ್ಣದ ರಾಖಿ ಕಟ್ಟಬೇಕು.
ವಿಷ್ಣುವಿಗೆ ಅರಿಶಿನದ ಬಣ್ಣ ಪ್ರಿಯ. ರಕ್ಷಾಬಂಧನದ ದಿನದಂದು, ಹಳದಿ ಬಣ್ಣದ ರಾಖಿಯನ್ನು ವಿಷ್ಣುವಿಗೆ ಕಟ್ಟಿ ಅರಿಶಿನದ ತಿಲಕವನ್ನು ಹಚ್ಚಬೇಕು. ಇದ್ರಿಂದ ದೇವರು ಸಂತೋಷಗೊಂಡು, ಬೇಡಿದ ವರವನ್ನು ಭಕ್ತರಿಗೆ ನೀಡ್ತಾನೆ. ರಾಖಿ ಕಟ್ಟಿದ ನಂತ್ರ ಸಿಹಿ ನೀಡಬೇಕು.
ಶ್ರಾವಣ ಮಾಸದ ಹಬ್ಬ, ರಾಖಿ ಹಬ್ಬ. ಈಶ್ವರನಿಗೆ ರಾಖಿ ಹಬ್ಬದಂದು ನೀಲಿ ಬಣ್ಣದ ರಾಖಿ ಕಟ್ಟಬೇಕು. ಇದ್ರಿಂದ ಜೀವನದ ಎಲ್ಲಾ ಸಮಸ್ಯೆ ದೂರವಾಗುತ್ತದೆ. ಕುಟುಂಬದಲ್ಲಿ ಸಂತೋಷ, ಸುಖ ನೆಲೆಸುತ್ತದೆ.
ದ್ರೌಪತಿ, ಕೃಷ್ಣನ ಕೈಗೆ ಸೀರೆ ಚೂರನ್ನು ಕಟ್ಟಿದ ನಂತ್ರ ರಕ್ಷಾ ಬಂಧನ ಶುರುವಾಯ್ತೆಂದು ನಂಬಲಾಗುತ್ತದೆ. ರಕ್ಷಾ ಬಂಧನದ ದಿನ ಸದಾ ಸುಖ ಬಯಸಿ, ಕೃಷ್ಣನಿಗೆ ಹಸಿರು ಬಣ್ಣದ ರಾಖಿ ಕಟ್ಟಬೇಕು.
ರಕ್ಷಾ ಬಂಧನದ ದಿನ ಹನುಮಂತನಿಗೆ ಕೆಂಪು ದಾರವನ್ನು ಕಟ್ಟಬೇಕು. ಎಲ್ಲ ಕಷ್ಟಗಳು ಇದ್ರಿಂದ ದೂರವಾಗುತ್ತದೆ.