alex Certify 40ರ ವಯಸ್ಸಿನಲ್ಲೂ ಗರ್ಭ ಧರಿಸುವ ಬಗ್ಗೆ ಯೋಚಿಸುತ್ತಿದ್ದೀರಾ….? ಅನುಸರಿಸಿ ಈ ಮಾರ್ಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

40ರ ವಯಸ್ಸಿನಲ್ಲೂ ಗರ್ಭ ಧರಿಸುವ ಬಗ್ಗೆ ಯೋಚಿಸುತ್ತಿದ್ದೀರಾ….? ಅನುಸರಿಸಿ ಈ ಮಾರ್ಗ

40 ವರ್ಷ ಸರಿದ ಬಳಿಕ ಗರ್ಭವತಿಯಾಗೋದು ಅಂದರೆ ಸಾಮಾನ್ಯವಾದ ಮಾತಂತೂ ಅಲ್ಲವೇ ಅಲ್ಲ. ಈ ವಯಸ್ಸಿನಲ್ಲಿ ಮಹಿಳೆಯ ದೇಹದಲ್ಲಿ ಫಲವತ್ತತೆ ಕ್ಷೀಣಿಸುತ್ತಾ ಬರೋದ್ರಿಂದ ಗರ್ಭಿಣಿಯಾಗಲು ಇದು ಸೂಕ್ತ ವಯಸಲ್ಲ ಎಂದು ಹೇಳಲಾಗುತ್ತದೆ. ಹಾಗಂತ ನೀವು ಈ ವಯಸ್ಸಿನಲ್ಲಿ ತಾಯಿ ಆಗಲೇಬಾರದು ಅಥವಾ ತಾಯಿ ಆಗೋಕೇ ಸಾಧ್ಯವೇ ಇಲ್ಲ ಎಂದೇನಲ್ಲ.

ಮೊದಲೆಲ್ಲ ಮಗು ಬೇಡ ಎಂದು ನಿರ್ಧಾರ ಮಾಡಿದವರಿಗೆ 40 ವಯಸ್ಸು ದಾಟಿದ ಬಳಿಕ ಮಗು ಹೊಂದಬೇಕು ಎಂಬ ಆಸೆ ಆಗಬಹುದು. ಅಥವಾ 40 ವರ್ಷ ದಾಟಿದ ಮೇಲೆ ನನಗೆ ಮಕ್ಕಳೇ ಆಗಲ್ಲ ಎಂದು ಭಯ ಇರುವವರಿಗೆ ಮುಂದೇನಪ್ಪ ಎಂದು ಚಿಂತೆ ಕಾಡಬಹುದು. ಆದರೆ ನೀವು ಮನಸ್ಸು ಮಾಡಿದಲ್ಲಿ ಈ ವಯಸ್ಸಿನಲ್ಲಿ ಕೂಡ ಗರ್ಭವತಿ ಆಗಬಹುದಾಗಿದೆ.

ಮಹಿಳೆಯರಲ್ಲಿ 40 ವರ್ಷ ದಾಟಿದ ಬಳಿಕ ಅಂಡಾಣುಗಳ ಗುಣಮಟ್ಟ ಹಾಗೂ ಪ್ರಮಾಣವು ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದಾಗಿ ಈ ವಯಸ್ಸಿನಲ್ಲಿ ನೈಸರ್ಗಿಕವಾಗಿ ಗರ್ಭವತಿಯಾಗೋದು ಕಷ್ಟವಾಗುತ್ತದೆ. ಆದರೆ ಈಗಿರುವ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಗರ್ಭ ಧರಿಸಬಹುದಾಗಿದೆ. ಅಸಿಸ್ಟೆಡ್​​ ರಿಪ್ರಾಡಕ್ಟಿವ್​​ ತಂತ್ರಜ್ಞಾನದ ಮೂಲಕ ಗರ್ಭ ಧರಿಸಬಹುದು. ಇದನ್ನು​ ಐವಿಎಫ್​​ ತಂತ್ರಜ್ಞಾನ ಹಾಗೂ ಸ್ಪರ್ಮ್​ ಇಂಜೆಕ್ಷನ್​​ ವಿಧಾನಗಳ ಮೂಲಕ ಮಾಡುತ್ತಾರೆ. ಈ ವಿಧಾನಗಳ ಸಹಾಯದಿಂದ ದಂಪತಿ 40ರ ಬಳಿಕವೂ ಮಕ್ಕಳನ್ನು ಹೊಂದಬಹುದಾಗಿದೆ.

ಆದರೆ ನೈಸರ್ಗಿಕವಾಗಿ ಗರ್ಭ ಧರಿಸುವುದಕ್ಕಿಂತ ಈ ವಿಧಾನಗಳಲ್ಲಿ ಮಹಿಳೆ ಇನ್ನಷ್ಟು ಜಾಗರೂಕರಾಗಿ ಇರಬೇಕು. 40 ವರ್ಷದ ಬಳಿಕ ಧರಿಸುವ ಗರ್ಭವು ಅತ್ಯಂತ ಅಪಾಯಕಾರಿಯಾಗಿದೆ. ಈ ಸಂದರ್ಭದಲ್ಲಿ ಗರ್ಭಿಣಿಯರಲ್ಲಿ ಮಧುಮೇಹ , ರಕ್ತದೊತ್ತಡ, ಥೈರಾಯ್ಡ್​​ ಹಾಗೂ ಸ್ಥೂಲಕಾಯ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಸೂಕ್ತ ಆಹಾರ ಕ್ರಮ, ಸರಿಯಾದ ಔಷದೋಪಚಾರ ಹಾಗೂ ಕಾಳಜಿಯ ಅವಶ್ಯಕತೆ ಹೆಚ್ಚಾಗಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...