ಬೇಕಾಗುವ ಸಾಮಾಗ್ರಿ: ಗೋಧಿ ಹುಡಿ – ಅರ್ಧ ಕೆ.ಜಿ, ಮೆಣಸಿನಹುಡಿ – 1 ಟೀ ಸ್ಪೂನ್, ಸಕ್ಕರೆ – 2 ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ – 2 ಟೀ ಸ್ಪೂನ್, ಕರಿಯಲು ಎಣ್ಣೆ.
ಮಾಡುವ ವಿಧಾನ: ಅರ್ಧ ಕೆ.ಜಿ. ಗೋಧಿ ಹುಡಿಗೆ ಸ್ವಲ್ಪ ಉಪ್ಪು, ಸ್ವಲ್ಪ ಮೆಣಸಿನ ಹುಡಿ ಹಾಕಿ. ಜೊತೆಗೆ ಸ್ವಲ್ಪ ಸಕ್ಕರೆ, 2 ಟೀ ಸ್ಪೂನ್ ನಷ್ಟು ಕೈಯಲ್ಲೇ ಸ್ಮಾಶ್ ಮಾಡಿ ಜೀರಿಗೆಯನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ 3 ಸ್ಪೂನ್ ನಷ್ಟು ಅಡುಗೆ ಎಣ್ಣೆ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಚಪಾತಿ ಹಿಟ್ಟು ಕಲಸಿದಂತೆ ರೆಡಿ ಮಾಡಿಟ್ಟು, 15 ನಿಮಿಷ ಮುಚ್ಚಿಟ್ಟು ಬಿಡಿ.
15 ನಿಮಿಷದ ನಂತರ ಮತ್ತೆ ಮಿಕ್ಸ್ ಮಾಡಿ ಉಂಡೆ ಮಾಡಿಕೊಳ್ಳಿ. ಚಪಾತಿ ಮಣೆಗೆ ಸ್ವಲ್ಪ ಹಿಟ್ಟು ಹಾಕಿ ಲಟ್ಟಿಸಿಕೊಳ್ಳಿ. ತುಂಬಾ ತೆಳುವೂ ಅಲ್ಲ ದಪ್ಪವೂ ಅಲ್ಲದಂತೆ ಲಟ್ಟಿಸಿಕೊಂಡು ಬಳಿಕ ಡೈಮಂಡ್ ಆಕಾರಕ್ಕೆ ಕಟ್ ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ಕರಿಯಲು ಎಣ್ಣೆ ಹಾಕಿ ಬಿಸಿ ಆದಾಗ ಕರಿದುಕೊಳ್ಳಿ. ಮಧ್ಯಮ ಉರಿಯಲ್ಲಿಟ್ಟು ಚೆನ್ನಾಗಿ ಕರಿದರೆ ಬಿಸಿ ಬಿಸಿ ಚಹಾ ಜೊತೆ ಸವಿಯಲು ತುಕುಡಿ(ಗೋಧಿ ಹುಡಿ ಸ್ನಾಕ್ಸ್) ರೆಡಿ.