alex Certify ಬಿಸಿ ಬಿಸಿ ಅನ್ನದ ಜತೆ ಕೊಬ್ಬರಿ ಚಟ್ನಿಪುಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿ ಬಿಸಿ ಅನ್ನದ ಜತೆ ಕೊಬ್ಬರಿ ಚಟ್ನಿಪುಡಿ

ಬೇಕಾಗುವ ಸಾಮಾಗ್ರಿಗಳು: ಕೊಬ್ಬರಿ -2 ಬಟ್ಟಲು, ಕರಿಬೇವುಸೊಪ್ಪು, ತೆಂಗಿನೆಣ್ಣೆ/ಬೇರೆ ಯಾವುದಾದರೂ ಎಣ್ಣೆ – 4 ಟೀ ಸ್ಪೂನ್, ½ ಕಪ್ ಕಡಲೇಬೇಳೆ, ಬ್ಯಾಡಗಿ ಮೆಣಸು – 12, ಧನಿಯಾ – 1 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಒಂದು ನಿಂಬೆ ಹಣ್ಣು ಗಾತ್ರದಷ್ಟು ದೊಡ್ಡ ಹುಣಸೆಹಣ್ಣು, ಸ್ವಲ್ಪ ಬೆಲ್ಲ.

ಮಾಡುವ ವಿಧಾನ: ಕೊಬ್ಬರಿಯನ್ನು ಸಣ್ಣಗೆ ತುರಿಯಬೇಕು. ಬಾಣಲೆಗೆ ಎಣ್ಣೆ ಹಾಕದೆ ಹಾಗೆ ಚೆನ್ನಾಗಿ ಹುರಿಯಬೇಕು. ಮಧ್ಯಮ ಉರಿಯಲ್ಲಿಟ್ಟು ಹುರಿಯಬೇಕು. ಕೆಂಪಗೆ, ಪರಿಮಳ ಬಂದರೆ ಸಾಕು ಹುರಿಯೋದನ್ನು ನಿಲ್ಲಿಸಿ ತಣಿಯಲು ಇನ್ನೊಂದು ಪಾತ್ರೆಗೆ ಹಾಕಿಡಿ. ಬಳಿಕ ಬಾಣಲೆಯಲ್ಲಿ 4 ಟೀ ಸ್ಪೂನ್ ನಷ್ಟು ಎಣ್ಣೆ ಹಾಕಿ ಅದು ಬಿಸಿಯಾದ ಕೂಡಲೇ ಕಡಲೇಬೇಳೆ ಹಾಕಿ ಹುರಿಯಿರಿ. ಕಡಲೇಬೇಳೆ ಸ್ವಲ್ಪ ಕೆಂಪಗಾದ ಕೂಡಲೇ 12 ಬ್ಯಾಡಗಿ ಮೆಣಸು ಜೊತೆಗೆ 1 ಕಪ್ ಧನಿಯಾ ಹಾಕಿ ಹುರಿಯಬೇಕು. ಕಂದು ಬಣ್ಣ ಬರುವವರೆಗೂ ಚೆನ್ನಾಗಿ ಹುರಿಯಬೇಕು. ಕೊನೆಗೆ ಪರಿಮಳಕ್ಕೆ ಎರಡು ಮುಷ್ಠಿಯಷ್ಟು ಕರಿಬೇವು ಸೊಪ್ಪು ಹಾಕಿ ಹುರಿಯಬೇಕು. ಕರಿಬೇವು ಸೊಪ್ಪು ಹಾಕಿ 1 ನಿಮಿಷ ಹುರಿದರೆ ಸಾಕು.

ʼಕಳಲೆʼ ಬಗ್ಗೆ ನಿಮಗೆಷ್ಟು ಗೊತ್ತು….?

ಮಸಾಲೆ ತಣಿದ ಕೂಡಲೇ ಮಿಕ್ಸಿ ಜಾರಿಗೆ ಹಾಕಿ, ಜತಗೆ 1 ನಿಂಬೆ ಹಣ್ಣು ಗಾತ್ರದಷ್ಟು ದೊಡ್ಡದ ಹುಣಸೆಹಣ್ಣನ್ನು ಹಾಕಬೇಕು. ರುಚಿಗೆ ತಕ್ಕಷ್ಟು ಉಪ್ಪು, ಹಾಗೂ ಸಣ್ಣ ತುಂಡು ಬೆಲ್ಲ ಹಾಕಿ ನೀರು ಹಾಕದೆ ಪುಡಿ ಮಾಡಬೇಕು. ಇನ್ನು ಹುಡಿಮಾಡಿಕೊಂಡಂತಹ ಮಸಾಲೆಯನ್ನು ಹುರಿದಿಟ್ಟಂತಹ ಕೊಬ್ಬರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಬಳಿಕ ಈ ಮಿಶ್ರಣವನ್ನು ಸ್ವಲ್ಪ ಸ್ವಲ್ವವೇ ಮಿಕ್ಸಿ ಜಾರಿಗೆ ಹಾಕಿಕೊಂಡು ಹುಡಿ ಮಾಡಬೇಕು. ಎಲ್ಲವನ್ನೂ ಹುಡಿ ಮಾಡಿಕೊಂಡ ಬಳಿಕ ಈ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಬಿಸಿ ಬಿಸಿ ಅನ್ನದ ಜತೆ ಸವಿಯಲು ಕೊಬ್ಬರಿ ಚಟ್ನಿ ಸಿದ್ಧ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...