ಬೇಕಾಗುವ ಸಾಮಾಗ್ರಿಗಳು: ಅಲೋವೆರಾ-1 ಕೋಡು, ನಿಂಬೆ ರಸ ಸ್ವಲ್ಪ, ಶುಂಠಿ- ಸ್ವಲ್ಪ, ಕರಿಮೆಣಸು 1 ರಿಂದ 2
ಮಾಡುವ ವಿಧಾನ:
ಅಲೋವೆರಾದ ಒಳಗಿರುವ ಜೆಲ್ಲಿಯಂತಹ ವಸ್ತುವನ್ನು ತೆಗೆಯಬೇಕು. ಇದಕ್ಕೆ ಸ್ವಲ್ವ ಶುಂಠಿ, ಕರಿಮೆಣಸು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಬಳಿಕ ರುಬ್ಬಿಕೊಂಡಿರುವ ಈ ರಸಕ್ಕೆ 2 ಕಪ್ ಆಗುವಷ್ಟು ನೀರು ಸೇರಿಸಿ. ಸ್ವಲ್ಪ ಉಪ್ಪು, ಅರ್ಧ ನಿಂಬೆರಸ ಹಾಕಿ ಬೆರೆಸಬೇಕು. ಜೇನುತುಪ್ಪ 2 ಟೀ ಸ್ಪೂನ್ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಸಿಹಿಗೆ ಸಕ್ಕರೆ ಅಥವಾ ಬೆಲ್ಲದ ಬದಲು ಜೇನುತುಪ್ಪ ಹಾಕಬಹುದು.
ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಒಂದು ಗ್ಲಾಸ್ ಗೆ ಹಾಕಿ ಸರ್ವ್ ಮಾಡಿದರೆ ಆರೋಗ್ಯಕ್ಕೆ ಹಿತವಾದ ಅಲೋವೇರಾ ಜ್ಯೂಸ್ ರೆಡಿ.