alex Certify ನೀವು ʼಗಾರ್ಡನಿಂಗ್ʼ ಮಾಡುವಿರಾ…..? ಈ ಕೆಲ ಸಸ್ಯಗಳನ್ನು ನೆಡಲು ಇದು ಸಕಾಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ʼಗಾರ್ಡನಿಂಗ್ʼ ಮಾಡುವಿರಾ…..? ಈ ಕೆಲ ಸಸ್ಯಗಳನ್ನು ನೆಡಲು ಇದು ಸಕಾಲ

ಮಳೆಗಾಲ ಆರಂಭವಾಗಿದೆ. ನಿಮ್ಮ ಮನೆಯಂಗಳದಲ್ಲಿ ಈ ಕೆಲವಷ್ಟು ಸಸ್ಯಗಳನ್ನು ನೆಡಲು ಇದು ಸಕಾಲ.
ಗಿಡ ನೆಡಲು ಮನೆಯಂಗಳವೇ ಆಗಬೇಕೆಂದಿಲ್ಲ. ಮೇಲ್ಛಾವಣಿ, ಬಾಲ್ಕನಿ, ಕಿಟಕಿಯಂಥ ಸಣ್ಣ ಜಾಗವೂ ಸಾಕು. ಇದಕ್ಕೆ ದೊಡ್ಡ ಪಾಟ್ ಗಳನ್ನೇ ಬಳಸಬೇಕೆಂದೂ ಇಲ್ಲ. ನಿಮ್ಮ ಅಡುಗೆ ಮನೆಯ ಡಬ್ಬಿಗಳು, ಹಾಲಿನ ಪ್ಯಾಕೆಟ್, ನೀರು, ಜ್ಯೂಸ್ ನ ಬಾಟಲಿಗಳೂ ಸಾಕು.

ಇವು ಮನೆಯ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ, ನೀವೇ ಬೆಳೆದ ಗಿಡಗಳು ಬೆಳೆದು ನಿಂತಾಗ ನಿಮ್ಮ ಮನಸ್ಸಿಗೆ ಮುದ ನೀಡುತ್ತವೆ ಹಾಗೂ ಒತ್ತಡವನ್ನೂ ಕಡಿಮೆ ಮಾಡುತ್ತವೆ. ಹೀಗೆ ಬೆಳೆಯುವಾಗ ಅಲಂಕಾರಿಕ ಗಿಡಗಳ ಜೊತೆಗೆ ಔಷಧೀಯ ಸಸ್ಯಗಳನ್ನೂ ಬೆಳೆಯಿರಿ.

ಟೆರೆಸ್ ಗಾರ್ಡನಿಂಗ್ ಮೂಲಕ ಹಸಿಮೆಣಸು, ಟೊಮೆಟೊ, ಬದನೆ, ಹುರುಳಿಕಾಯಿ ಗಿಡಗಳನ್ನು ನೆಟ್ಟು ಸಣ್ಣ ಪ್ರಮಾಣದ ಕೃಷಿಯನ್ನು ನೀವೇ ಮಾಡಬಹುದು. ಸಮೀಪದ ತೋಟಗಾರಿಕೆ ಇಲಾಖೆಯ ಮಂದಿ ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳು ಒದಗಿಸುತ್ತಾರೆ. ಅಡುಗೆ ಮನೆಯ ತ್ಯಾಜ್ಯವನ್ನು ಗೊಬ್ಬರವಾಗಿ ಬದಲಾಯಿಸಿ ಈ ಸಸ್ಯಗಳಿಗೆ ಉಣಿಸಿ. ಇದರಿಂದ ಪರಿಸರವೂ ಸ್ವಚ್ಛಗೊಳ್ಳುತ್ತದೆ, ಉಸಿರಾಟಕ್ಕೆ ಸ್ವಚ್ಛವಾದ ಗಾಳಿಯೂ ಲಭ್ಯವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...