ಮೇಷ : ಉದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ಇದು ಉತ್ತಮ ದಿನವಾಗಿದೆ, ಬಹಳ ದಿನಗಳ ಬಳಿಕ ಆಪ್ತರನ್ನ ಭೇಟಿ ಮಾಡಲಿದ್ದೀರಿ. ಆಸ್ತಿ ವಿಚಾರದಲ್ಲಿ ಉಂಟಾದ ತಪ್ಪು ಕಲ್ಪನೆಯು ದೊಡ್ಡ ಜಗಳಕ್ಕೆ ನಾಂದಿ ಹಾಡಬಹುದು. ಎಚ್ಚರದಿಂದಿರಿ.
ವೃಷಭ : ಮಾನಸಿಕ ಆರೋಗ್ಯ ಸುಧಾರಿಸಲಿದೆ. ಧಾರ್ಮಿಕ ಕಾರ್ಯಗಳತ್ತ ಒಲವು ತೋರಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಇದ್ದ ತೊಡಕುಗಳು ನಿವಾರಣೆ ಆಗಲಿದೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಸಂಗಾತಿಯೊಡನೆ ಉತ್ತಮ ಸಮಯವನ್ನ ಕಳೆಯಲಿದ್ದೀರಿ.
ಮಿಥುನ : ಬೇರೆಯವರ ವಿಚಾರದಲ್ಲಿ ಮೂಗು ತೂರಿಸುವ ಬುದ್ಧಿಯನ್ನ ಬಿಟ್ಟು ಬಿಡಿ. ನಿಮ್ಮ ಅತಿ ಬುದ್ದಿವಂತಿಕೆ ನಿಮಗೆ ತೊಡಕು ಉಂಟು ಮಾಡಬಹುದು. ಮನೆಯ ಹಿರಿಯ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಮನೆಯಲ್ಲಿ ಶಾಂತಿ – ಸಮಾಧಾನ ಇರಲಿದೆ.
ಕಟಕ : ಮನೆಯವರ ಆಶೋತ್ತರಗಳನ್ನ ತೀರಿಸುವ ಭರದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳದಿರಿ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಮಾತು ಗಮನದಲ್ಲಿರಲಿ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ಅನಿರೀಕ್ಷಿತ ಕಡೆಯಿಂದ ಆರ್ಥಿಕ ಲಾಭ ಹರಿದುಬರಲಿದೆ.
ಸಿಂಹ : ಕೌಟುಂಬಿಕ ಜೀವನದಲ್ಲಿ ಸಂಘರ್ಷಗಳು ದೂರಾಗಿ ಪ್ರೀತಿ ನೆಲೆಸಲಿದೆ. ಮನೆಯಲ್ಲಿ ಶುಭಕಾರ್ಯಗಳು ಜರುಗುವ ಸೂಚನೆ ಇದೆ. ನವದಂಪತಿಗೆ ಸಂತಾನ ಭಾಗ್ಯವಿದೆ. ಬಾಲ್ಯದ ಕೆಲ ಕ್ಷಣಗಳನ್ನ ಆಪ್ತರೊಡನೆ ಮೆಲುಕು ಹಾಕಲಿದ್ದೀರಿ.
ಕನ್ಯಾ : ಕಬ್ಬಿಣದ ವ್ಯಾಪಾರಿಗಳಿಗೆ ಇಂದಿನ ದಿನ ಕಬ್ಬಿಣದ ಕಡಲೆಯೇ ಆಗಿರಲಿದೆ. ವೈದ್ಯಕೀಯ ವೃತ್ತಿಯವರಿಗೆ ಉತ್ತಮ ಅವಕಾಶ ಸಿಗಲಿದೆ. ನೀವು ಮಾಡುವ ಕೆಲಸಗಳಿಗೆ ಗುರು – ಹಿರಿಯರ ಆಶೀರ್ವಾದ ಸಿಗಲಿದೆ.
ತುಲಾ : ಕೆಲಸ ಬದಲಾವಣೆ ಮಾಡುವ ಪ್ರಸಂಗ ಎದುರಾಗಲಿದೆ. ದೊಡ್ಡ ನಿರ್ಧಾರಗಳನ್ನ ಕೈಗೊಳ್ಳುವ ಮುನ್ನ ಹಿರಿಯರೊಂದಿಗೆ ಚರ್ಚೆ ಮಾಡಿ. ಸಂಗಾತಿಯೊಂದಿಗೆ ನಿಮ್ಮ ಮನಸ್ಸಿನ ನೋವನ್ನ ಹೇಳಿಕೊಳ್ಳಿ. ಆರ್ಥಿಕವಾಗಿ ಈ ದಿನ ನಿಮಗೆ ಸಾಮಾನ್ಯವಾಗಿರಲಿದೆ.
ವೃಶ್ಚಿಕ : ಮನೆಯಲ್ಲಿ ಸುಖ – ಶಾಂತಿಯನ್ನ ತರುವಲ್ಲಿ ನೀವೇ ಪ್ರಮುಖ ಪಾತ್ರ ವಹಿಸಲಿದ್ದೀರಿ. ನಿಮ್ಮ ವ್ಯಕ್ತಿತ್ವ ಎಲ್ಲರಿಗೂ ಇಷ್ಟವಾಗುವಂತದ್ದು. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಸಿಗಲಿದೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಂಕಣ ಭಾಗ್ಯವಿದೆ.
ಧನು : ಜಟಿಲ ಸಮಸ್ಯೆಗಳಿಗೆ ಸ್ನೇಹಿತರಿಂದ ಸಲಹೆಯನ್ನ ಪಡೆಯಲಿದ್ದೀರಿ. ಜವಳಿ ಉದ್ಯಮಿಗಳಿಗೆ ಇದು ಲಾಭದಾಯಕ ದಿನವಾಗಿದೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಕುಲದೇವತೆಯನ್ನ ಆರಾಧಿಸಿ.
ಮಕರ : ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದೆ. ಆರ್ಥಿಕವಾಗಿ ಯಾವುದೇ ಸಮಸ್ಯೆ ಇರೋದಿಲ್ಲ. ಪೋಷಕರ ಆರೋಗ್ಯ ಸುಧಾರಿಸಲಿದೆ. ಮನೆಯವರೊಂದಿಗೆ ಹೆಚ್ಚಿನ ಸಮಯ ಕಳೆಯಲು ಯತ್ನಿಸಿ.
ಕುಂಭ : ದೀರ್ಘಕಾಲದ ಆರೋಗ್ಯ ಸಮಸ್ಯೆ ಹೊಂದಿರುವ ನೀವು ಇಂದು ಕೊಂಚ ಗುಣಮುಖರಾಗುತ್ತೀರಿ. ದೇಹದಲ್ಲಿ ಹೊಸ ಚೈತನ್ಯ ತುಂಬಲಿದೆ. ಸಂಗಾತಿಯ ಕಾಳಜಿಯಿಂದ ನೀವು ಲವಲವಿಕೆಯಿಂದ ಇರಲಿದ್ದೀರಿ. ಹಣದ ವಿಷಯದಲ್ಲಿ ಯಾವುದೇ ತೊಂದರೆ ಇರೋದಿಲ್ಲ.
ಮೀನ : ನಿಮ್ಮ ವ್ಯಕ್ತಿತ್ವದಿಂದಲೇ ಎಲ್ಲರನ್ನೂ ಆಕರ್ಷಿಸುವ ಸ್ವಭಾವ ನಿಮ್ಮಲ್ಲಿದೆ. ಸಂಗಾತಿಯಿಂದ ಉಡುಗೊರೆಯನ್ನ ಪಡೆಯಲಿದ್ದೀರಿ. ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ. ಕೆಲಸದ ಮೇಲೆ ಶ್ರದ್ಧೆ ಇರಲಿ. ದೇವತಾನುಗ್ರಹವಿದೆ.