alex Certify ಈ ರಾಶಿಯವರಿಗಿದೆ ಇಂದು ಕೈಗೊಳ್ಳುವ ಎಲ್ಲಾ ಕಾರ್ಯದಲ್ಲೂ ಯಶಸ್ಸು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಕೈಗೊಳ್ಳುವ ಎಲ್ಲಾ ಕಾರ್ಯದಲ್ಲೂ ಯಶಸ್ಸು

ಮೇಷ : ನಿರುದ್ಯೋಗಿಗಳಿಗೆ ಶುಭ ಸುದ್ದಿ ಕಾದಿದೆ. ಆಸ್ತಿ ವಾಜ್ಯ ಸಂಬಂಧ ಕೋರ್ಟ್​ ಮೆಟ್ಟಿಲೇರಿದ ಪ್ರಕರಣವು ನಿಮ್ಮ ಪಾಲಾಗಲಿದೆ. ಹೂಡಿಕೆ ಮಾಡಬೇಕು ಎಂದುಕೊಂಡವರಿಗೆ ಇದು ಉತ್ತಮ ದಿನವಾಗಿದೆ.

ವೃಷಭ : ಆರ್ಥಿಕವಾಗಿ ಅಧಿಕ ಖರ್ಚನ್ನ ಎದುರಿಸಲಿದ್ದೀರಿ. ಉದ್ಯಮದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಒಳ್ಳೆಯ ಆಸಕ್ತಿ ಬರಲಿದೆ. ಚಿನ್ನಾಭರಣ ಖರೀದಿ ಮಾಡುವ ಸಾಧ್ಯತೆ ಇದೆ.

ಮಿಥುನ : ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ದಾಯಾದಿಗಳ ನಡುವಿನ ಕಲಹ ಶಮನವಾಗಲಿದೆ. ಮನೆಯಲ್ಲಿ ಶುಭ ಕಾರ್ಯದ ಮಾತುಕತೆ ನಡೆಯಲಿದೆ. ಕಚೇರಿಯಲ್ಲಿ ನಿಮ್ಮ ಹೆಸರನ್ನ ಹಾಳು ಮಾಡುವವರ ಬಗ್ಗೆ ಎಚ್ಚರದಿಂದಿರಿ. ಹಿರಿಯರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಜಾಗ್ರತೆ ಇರಲಿ.

ಕಟಕ : ವೃತ್ತಿ ರಂಗದಲ್ಲಿರುವ ಕಿರಿಕಿರಿ ಶಮನವಾಗಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಕೊಂಚ ಎಚ್ಚರಿಕೆ ಇರಲಿ. ಧನಾಗಮನವಿದೆ.

ಸಿಂಹ : ಸಂಗಾತಿಯ ಇಷ್ಟಾರ್ಥಗಳನ್ನ ನೀವು ಪೂರೈಸಲಿದ್ದೀರಿ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಾತಿನ ವೇಳೆ ಜಾಗೃತಿ ಇರಲಿ. ವೈವಾಹಿಕ ಸಂಬಂಧಕ್ಕೆ ಕಾಯುತ್ತಿರುವವರಿಗೆ ಶುಭ ಸಂಕೇತವಿದೆ.

ಕನ್ಯಾ : ದಾಂಪತ್ಯ ಜೀವನದಲ್ಲಿ ಕಿರಿಕಿರಿ ದೂರಾಗಿ ಶಾಂತಿ ನೆಲೆಸಲಿದೆ. ವ್ಯಾಪಾರದ ಉದ್ದೇಶದಿಂದ ದೂರ ಪ್ರಯಾಣ ಕೈಗೊಳ್ಳಬೇಕಾಗಿ ಬರಬಹುದು. ಮಾನಸಿಕವಾಗಿ ಸದೃಢರಾಗಲಿದ್ದೀರಿ. ಹನುಮಂತನನ್ನ ಧ್ಯಾನಿಸಿ.

ತುಲಾ : ಉದ್ಯೋಗ ಬದಲಾವಣೆ ಮಾಡಲಿದ್ದೀರಿ. ಕೃಷಿಕರಿಗೆ ಲಾಭವಿದೆ. ಉತ್ತಮ ಪ್ರತಿಭೆ ಹೊಂದಿರುವ ಮಕ್ಕಳಿಗೆ ಅವಕಾಶಗಳು ಹುಡುಕಿಕೊಂಡು ಬರಲಿದೆ. ವಾಹನ ಖರೀದಿ ಮಾಡಲಿದ್ದೀರಿ. ಖರ್ಚು ವೆಚ್ಚದ ಮೇಲೆ ಹಿಡಿತ ಇರಲಿ.

ವೃಶ್ಚಿಕ : ಹಣಕಾಸು ಯೋಜನೆಯಲ್ಲಿ ಯಾವುದೇ ಹೂಡಿಕೆ ಮಾಡಬೇಡಿ. ವೈದ್ಯಕೀಯ ರಂಗದವರಿಗೆ ಒತ್ತಡ ಹೆಚ್ಚಾಗಲಿದೆ. ಕುಟುಂಬಸ್ಥರ ಜೊತೆ ದೂರ ಪ್ರಯಾಣ ಕೈಗೊಳ್ಳಲಿದ್ದೀರಿ. ಮನೆಯಲ್ಲಿ ಶುಭ ಕಾರ್ಯದ ಮುನ್ಸೂಚನೆ ಇದೆ.

ಧನು : ಬಹಳ ಸಮಯದ ಹಿಂದೆ ಕಳೆದುಹೋದ ವಸ್ತುವೊಂದು ನಿಮ್ಮ ಕೈ ಸೇರಲಿದೆ. ವ್ಯಾಪಾರಸ್ಥರಿಗೆ ಇದು ನಷ್ಟದ ದಿನವಾಗಿದೆ. ಸಂಗಾತಿ ಜೊತೆ ದೂರದ ಸ್ಥಳಕ್ಕೆ ಪ್ರಯಾಣ ಬೆಳೆಸಲಿದ್ದೀರಿ. ನವದಂಪತಿಗೆ ಸಂತಾನ ಭಾಗ್ಯವಿದೆ.

ಮಕರ : ಸರ್ಕಾರಿ ಕಚೇರಿಯಲ್ಲಿ ಇರುವವರಿಗೆ ನೆಮ್ಮದಿ ಇರಲಿದೆ. ಪೋಷಕರ ಜೊತೆ ಉತ್ತಮ ಸಮಯ ಕಳೆಯಲಿದ್ದೀರಿ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಜವಳಿ ಉದ್ಯಮಿಗಳಿಗೆ ಲಾಭದ ದಿನವಾಗಿದೆ.

ಕುಂಭ : ವೃತ್ತಿರಂಗದಲ್ಲಿದ್ದ ಕಿರಿಕಿರಿಯೆಲ್ಲ ದೂರಾಗಿ ನೆಮ್ಮದಿ ಸಿಗಲಿದೆ. ಮೇಲಾಧಿಕಾರಿಗಳ ವಿಶ್ವಾಸ ಗಳಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಲಿದ್ದೀರಿ. ಸ್ನೇಹಿತರು ನಿಮ್ಮ ಸಹಾಯಕ್ಕೆ ಧಾವಿಸಲಿದ್ದಾರೆ. ಪ್ರಯಾಣದ ವೇಳೆ ಎಚ್ಚರಿಕೆ ಇರಲಿ.

ಮೀನ : ವೈವಾಹಿಕ ಜೀವನದಲ್ಲಿ ನೆಮ್ಮದಿ ನೆಲೆಸಲಿದೆ. ವಾಹನ ಸಂಚಾರ ಮಾಡುವಾಗ ಎಚ್ಚರಿಕೆಯಿಂದಿರಿ. ನಿಮ್ಮ ತಾಳ್ಮೆಯೇ ಕುಟುಂಬದ ಬಹುದೊಡ್ಡ ಜಗಳವನ್ನ ಶಮನ ಮಾಡಲಿದೆ. ಆರ್ಥಿಕ ಸಮಸ್ಯೆಗಳು ನಿಮ್ಮ ಬಾಧಿಸೋದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...