ʼಕೆಂಪು ಶ್ರೀಗಂಧʼ ಅಥವಾ ʼರಕ್ತ ಚಂದನʼದ ಉಪಯೋಗಗಳೇನು ತಿಳಿಯಿರಿ

ಕೆಂಪು ಶ್ರೀಗಂಧವನ್ನು ಸಾಮಾನ್ಯವಾಗಿ ಸೌಂದರ್ಯ ವರ್ಧಕ ವಸ್ತಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದು ಚರ್ಮದಲ್ಲಿರುವ ಸುಕ್ಕುಗಳು, ಮೊಡವೆಗಳು, ಒಣ ಚರ್ಮದಂತಹ ಅನೇಕ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ಈ ಕೆಂಪು ಶ್ರೀಗಂಧವನ್ನು ಮನೆಯ ಕೆಲಸಗಳಿಗೂ ಬಳಸಬಹುದು. ಅದು ಯಾವುದೆಂಬುದನ್ನು ತಿಳಿದುಕೊಳ್ಳೋಣ.

ಮಳೆಗಾಲದಲ್ಲಿ ವಾತಾವರಣದ ತೇವಾಂಶದಿಂದಾಗಿ ಕೋಣೆ ತೇವಾಂಶಗೊಂಡು ವಾಸನೆ ಬರಲು ಶುರುವಾಗುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಸುಗಂಧ ದ್ರವ್ಯಗಳನ್ನು ಬಳಸುವ ಬದಲು ಕೆಂಪು ಶ್ರೀಗಂಧದ ಪುಡಿಯನ್ನು ಬಳಸಿ. ಇದು 3-4 ದಿನಗಳ ಕಾಲ ಕೋಣೆಯನ್ನು ತಾಜಾವಾಗಿರಿಸುತ್ತದೆ. ಇದರಿಂದ ಯಾವುದೇ ಹಾನಿ ಇಲ್ಲ.

ಹಾಗಾಗಿ 3 ಚಮಚ ಕೆಂಪು ಶ್ರೀಗಂಧದ ಪುಡಿಗೆ 1 ಚಮಚ ಲ್ಯಾವೆಂಡರ್ ಆಯಿಲ್, 1 ಚಮಚ ಬೇವಿನ ಎಣ್ಣೆ, 3 ಕಪ್ ನೀರನ್ನು ಸೇರಿಸಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲಿನ ಸಹಾಯದಿಂದ ಕೋಣೆಯಲ್ಲಿ ಸ್ಪ್ರೇ ಮಾಡಿ. ಅಲ್ಲದೇ ಇದನ್ನು ಸಸ್ಯದಲ್ಲಿ ಕೀಟಗಳ ಸಮಸ್ಯೆಯಿದ್ದರೆ ಅದನ್ನು ಓಡಿಸಲು ಸಹ ಬಳಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read