ಮಾರುಕಟ್ಟೆಯಲ್ಲಿ ಅನೇಕ ಡಿಸೈನ್ ಸೋಫಾಗಳು ಲಭ್ಯವಿದೆ. ಬಹುತೇಕರ ಮನೆಯ ಹಾಲ್ ನ ಒಂದು ಭಾಗ ಸೋಫಾದಿಂದ ತುಂಬಿರುತ್ತದೆ. ಸುಂದರ ಸೋಫಾಗಳು ಕುಳಿತುಕೊಳ್ಳಲು ಮಾತ್ರವಲ್ಲ ಅನೇಕರ ಮನೆಯಲ್ಲಿ ವಿಶ್ರಾಂತಿ ಜಾಗವಾಗಿರುತ್ತದೆ. ಬಹಳಷ್ಟು ಮಂದಿ ಸೋಫಾದಲ್ಲಿ ನಿದ್ರೆ ಮಾಡುತ್ತಾರೆ. ಆದ್ರೆ ಸೋಫಾದ ಮೇಲೆ ಮಲಗುವುದು ತುಂಬಾ ಹಾನಿಕಾರಕ.
ಹಾಸಿಗೆಗಿಂತ ಸೋಫಾ ಹೆಚ್ಚು ಮೃದುವಾಗಿರುತ್ತದೆ. ಮೃದುವಾದ ಸ್ಪಂಜನ್ನು ಅದರ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಸ್ಪಂಜು ಆರಾಮದಾಯಕವಾಗಿರುವಂತೆ ಕಾಣುತ್ತದೆ. ಆದ್ರೆ ಆರೋಗ್ಯಕ್ಕೆ ಸಾಕಷ್ಟು ಹಾನಿ ಉಂಟುಮಾಡುತ್ತದೆ. ಇದು ಬೆನ್ನು ನೋವಿಗೆ ಕಾರಣವಾಗುತ್ತದೆ.
ಸೋಫಾದ ಮೇಲೆ ಮಲಗುವಾಗ ಕಾಲನ್ನು ಸರಿಯಾಗಿ ಇಡಲು ಬರುವುದಿಲ್ಲ. ಹಾಗಾಗಿ ಒಂದೇ ಭಂಗಿಯಲ್ಲಿ ತುಂಬಾ ಸಮಯ ಮಲಗಬೇಕಾಗುತ್ತದೆ. ಇದ್ರಿಂದ ಸೊಂಟ ಮತ್ತು ದೇಹದ ಇತರ ಭಾಗಗಳಲ್ಲಿನ ನೋವಿನ ಸಮಸ್ಯೆ ಕಾಡುತ್ತದೆ. ಸೋಫಾದಲ್ಲಿ ನಿದ್ರೆ ಮಾಡುವುದು ತಲೆ ನೋವಿಗೂ ಕಾರಣವಾಗುತ್ತದೆ. ಕುಟುಂಬಸ್ಥರು ಓಡಾಡುವ ಸ್ಥಳದಲ್ಲಿ ಸೋಫಾ ಇರುವುದ್ರಿಂದ ನಿದ್ರೆ ಸರಿಯಾಗಿ ಬರುವುದಿಲ್ಲ. ನಿದ್ರೆಯಲ್ಲಿ ವ್ಯತ್ಯಯವಾದ್ರೆ ಬೇರೆ ಸಮಸ್ಯೆ ಶುರುವಾಗುತ್ತದೆ.
ಸಣ್ಣ ನಿದ್ರೆಗಾಗಿ ನೀವು ಸೋಫಾ ಬಳಸಬಹುದು. ಆದ್ರೆ 7-8 ಗಂಟೆ ನಿದ್ರೆ ಮಾಡಲು ಬಯಸಿದ್ದರೆ ಸೋಫಾ ಆಯ್ಕೆ ಮಾಡಿಕೊಳ್ಳಬೇಡಿ. ಸುಖ ನಿದ್ರೆ ಬದಲು ಅಸಮಾಧಾನ, ನೋವಿನ ಸಮಸ್ಯೆ ಕಾಡುತ್ತದೆ.