ಆಲೂಗಡ್ಡೆ ಇಷ್ಟಪಡದ ವ್ಯಕ್ತಿಗಳಿಲ್ಲ. ಆಲೂಗಡ್ಡೆ ಅಡುಗೆ ರುಚಿಯನ್ನು ಹೆಚ್ಚಿಸುತ್ತೆ. ಆಲೂಗಡ್ಡೆ ಅಡುಗೆಗೆ ಮಾತ್ರವಲ್ಲ ಸೌಂದರ್ಯ ವರ್ಧಕವೂ ಹೌದು. ಆಲೂಗಡ್ಡೆಯಲ್ಲಿರುವ ಅಂಶ, ಚರ್ಮದ ಆರೈಕೆಗೆ ಸಹಕಾರಿ.
ಪ್ರತಿ ದಿನ ರಾತ್ರಿ ಮಲಗುವ ಮೊದಲು ಮುಖವನ್ನು ಸ್ವಚ್ಛವಾಗಿ ತೊಳೆದು ಆಲೂಗಡ್ಡೆ ರಸವನ್ನು ಹಚ್ಚಿ ಮಲಗಿ. ಶೀಘ್ರದಲ್ಲಿಯೇ ನೀವು ಇದ್ರ ಪರಿಣಾಮ ನೋಡಬಹುದು. ಉತ್ತಮ ಫಲಿತಾಂಶಕ್ಕಾಗಿ ನೀವು ಇದಕ್ಕೆ ಹಾಲು ಬೆರೆಸಬಹದು. ಹಾಲು ಮಿಶ್ರಿತ ಆಲೂಗಡ್ಡೆ ರಸವನ್ನು ಹತ್ತಿ ಸಹಾಯದಿಂದ ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ಮುಖವನ್ನು ಸ್ವಚ್ಛಗೊಳಿಸಿ.
ಎಣ್ಣೆ ಚರ್ಮಕ್ಕೆ ಆಲೂಗಡ್ಡೆ ಒಳ್ಳೆಯದು. ಆಲೂಗಡ್ಡೆ ರಸಕ್ಕೆ ಸ್ವಲ್ಪ ಮುಲ್ತಾನಿ ಮಿಟ್ಟಿ ಸೇರಿಸಿ ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಬಿಟ್ಟು ಸ್ವಚ್ಛಗೊಳಿಸಿ. ಮುಖದ ಹೊಳಪು ಪಡೆಯುತ್ತದೆ.
ಮುಖದ ಮೇಲೆ ಸುಕ್ಕು ಕಾಣಿಸಿಕೊಂಡಿದ್ದರೆ ಆಲೂಗಡ್ಡೆ ರಸ ಬಳಸಿ. ಆಲೂಗಡ್ಡೆ ರಸಕ್ಕೆ ಗ್ಲಿಸರಿನ್ ಹಾಗೂ ಹಾಲನ್ನು ಸೇರಿಸಿ ಹಚ್ಚಿಕೊಳ್ಳಬಹುದು.
ಕಣ್ಣಿನ ಕೆಳಗೆ ಕಪ್ಪು ಕಲೆಯಿದ್ದರೆ ಕತ್ತರಿಸಿದ ಆಲೂಗಡ್ಡೆಯನ್ನು ಕಣ್ಣಿನ ಮೇಲಿಟ್ಟು 5 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಿ. ಪ್ರತಿ ದಿನ ಹೀಗೆ ಮಾಡುತ್ತ ಬಂದಲ್ಲಿ ವಾರದಲ್ಲಿ ಫಲಿತಾಂಶ ಕಾಣುವಿರಿ.
ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ಆಲೂಗಡ್ಡೆಯನ್ನು ಕತ್ತರಿಸಿ ಮುಖದ ಮೇಲೆ ರಬ್ ಮಾಡಿ. ಸ್ವಲ್ಪ ಸಮಯ ಬಿಟ್ಟು ಮುಖವನ್ನು ಸ್ವಚ್ಛಗೊಳಿಸಿ.