ಸುಖಕರ ನಿದ್ರೆ ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ. ಆದ್ರೆ ಹಾಸಿಗೆಗೆ ಹೋದ ತಕ್ಷಣ ನಾವು ಮಾಡುವ ಕೆಲವೊಂದು ಕೆಲಸದಿಂದಾಗಿ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಜೊತೆಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಹಾಸಿಗೆಗೆ ಹೋದ ತಕ್ಷಣ ಇವುಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
ಕೆಲವರಿಗೆ ಎಲ್ಲ ಸಮಸ್ಯೆಗಳು ನೆನಪಾಗುವುದು ಹಾಸಿಗೆಗೆ ಹೋದ ನಂತ್ರ. ಯೋಚನೆ ಮಾಡುತ್ತಿದ್ದರೆ ನಿದ್ರೆ ನಿಮ್ಮ ಬಳಿ ಸುಳಿಯುವುದಿಲ್ಲ. ರಾತ್ರಿ ಸರಿಯಾಗಿ ನಿದ್ರೆ ಬರದಿದ್ದರೆ ಬೆಳಿಗ್ಗೆ ಒಳ್ಳೆಯ ಆರಂಭ ಸಾಧ್ಯವಿಲ್ಲ. ದೇಹ ದಣಿದಂತೆ ಭಾಸವಾಗುವ ಜೊತೆಗೆ ಕೆಲಸವನ್ನು ಮನಸ್ಸಿಟ್ಟು ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಶಾಂತ ಮನಸ್ಸಿನಿಂದ ಹಾಸಿಗೆಗೆ ಹೋಗಿ.
ಒಂದೊಂದು ದಿನ ಒಂದೊಂದು ಸಮಯದಲ್ಲಿ ನಿದ್ರೆ ಮಾಡಬೇಡಿ. ಪ್ರತಿದಿನ ಒಂದೇ ಸಮಯದಲ್ಲಿ ನಿದ್ರೆ ಮಾಡುವುದನ್ನು ರೂಢಿಸಿಕೊಳ್ಳಿ. ಬೆಳಿಗ್ಗೆ ಏಳುವ ಹಾಗೂ ರಾತ್ರಿ ಮಲಗುವ ಸಮಯದಲ್ಲಿ ಬದಲಾವಣೆ ಬೇಡ.
ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮಲಗುವ ಸ್ಥಳದಲ್ಲಿ ಇಡಬೇಡಿ. ಮೊಬೈಲ್ ನಿಂದ ದೂರವಿರಿ. ಮೊಬೈಲ್ ನಿಮ್ಮ ನಿದ್ರೆಯನ್ನು ಹಾಳು ಮಾಡುತ್ತದೆ ಎಂಬುದು ನೆನಪಿರಲಿ.