ವಯಸ್ಸಾದಂತೆ ಕಾಲುಗಳಲ್ಲಿ ಹಾಗೂ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಮೂಳೆ ಸವೆತವೇ ಇದಕ್ಕೆ ಮುಖ್ಯ ಕಾರಣ. ಇದಕ್ಕೆ ಸಾಸಿವೆ ಕಾಳು ಪರಿಣಾಮಕಾರಿ ಔಷಧ ಎಂಬುದು ನಿಮಗೆ ತಿಳಿದಿದೆಯೇ?
ಆಯುರ್ವೇದದ ಪ್ರಕಾರ ಸಾಸಿವೆ ಕಾಳುಗಳ ಪೇಸ್ಟ್ ಮಾಡಿ ಹಚ್ಚುವುದರಿಂದ ಕಾಲುಗಳ ನೋವು ಬಹುಬೇಗ ನಿವಾರಣೆಯಾಗುತ್ತದೆ. ಈ ಪೇಸ್ಟ್ ಮಾಂಸಖಂಡಗಳನ್ನು ಶಾಂತಗೊಳಿಸಿ ನೋವಿನಿಂದ ಮುಕ್ತಿ ಒದಗಿಸುತ್ತವೆ.
ಸ್ನಾನಕ್ಕೆ ಮುನ್ನ ಒಂದು ಬಕೆಟ್ ನೀರಿಗೆ ಒಂದು ಮುಷ್ಠಿ ಸಾಸಿವೆ ಕಾಳು ಹಾಕಿ ನಿಮ್ಮ ನೋವಿರುವ ಕಾಲನ್ನು ಅದರಲ್ಲಿ ಇಳಿಬಿಡಿ. ಕನಿಷ್ಠ 15 ನಿಮಿಷ ಕಾಲ ಹೀಗೆ ಮಾಡುವುದರಿಂದ ತಿಂಗಳೊಳಗೆ ನಿಮ್ಮ ಕಾಲುಗಳ ನೋವು ಕಡಿಮೆಯಾಗುತ್ತದೆ.
ಕಾಲುಗಳು ಊದಿಕೊಂಡಿದ್ದರೆ ಸಾಸಿವೆಯನ್ನು ನೀರಿನಲ್ಲಿ ನೆನೆಸಿಡಿ. ಅದೇ ನೀರು ಬೆರೆಸಿ ರುಬ್ಬಿ ತಯಾರಿಸಿದ ಪೇಸ್ಟ್ ಅನ್ನು ಹಚ್ಚಿಕೊಳ್ಳಿ. ಅರ್ಧ ಗಂಟೆ ಹೊತ್ತು ಒಣಗಲು ಬಿಡಿ. ದಿನಕ್ಕೆರಡು ಬಾರಿ ಹೀಗೆ ಮಾಡಿದರೆ ನೋವು ಹಾಗೂ ಬಾವು ಕಡಿಮೆಯಾಗುತ್ತದೆ.