ಮಾಲ್ ಗಳಲ್ಲಿ ಕೆಂಪಾದ ಸೇಬಿನೊಂದಿಗೆ ಸಾಲಾಗಿ ಹಸಿರು ಸೇಬುಗಳನ್ನೂ ಇಟ್ಟಿರುವುದನ್ನು ನೀವು ಗಮನಿಸಿರಬಹುದು. ಹಸಿರು ಸೇಬು ಕೂಡಾ ಪೋಷಕಾಂಶಗಳ ಆಗರ. ಅದರ ಸೇವನೆಯಿಂದ ಏನೆಲ್ಲಾ ಲಾಭ ಪಡೆಯಬಹುದು ಗೊತ್ತೇ….?
ಈ ಸೇಬಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಸಾಕಷ್ಟಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಮೂವತ್ತು ವರ್ಷದ ಬಳಿಕ ಮಹಿಳೆಯರು ದಿನಕ್ಕೊಂದು ಈ ಸೇಬು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ಮೂಳೆಯ ಸಮಸ್ಯೆ ಅಂದರೆ ಗಂಟು ನೋವಿನ ಸಮಸ್ಯೆ ನಿಮ್ಮನ್ನು ಕಾಡದು.
ಹಸಿರು ಸೇಬಿನಲ್ಲಿ ನಾರಿನಂಶದ ಪ್ರಮಾಣ ಹೆಚ್ಚಿರುವುದರಿಂದ ಇದನ್ನು ಸೇವಿಸಿದ ಬಹು ಹೊತ್ತಿನ ತನಕ ನಿಮಗೆ ಹಸಿವಾಗುವುದಿಲ್ಲ. ಹಾಗಾಗಿ ದೇಹ ತೂಕ ಇಳಿಸಿಕೊಳ್ಳಲು ಇದು ಹೇಳಿ ಮಾಡಿಸಿದ ಹಣ್ಣು.
ಇದು ಶ್ವಾಸಕೋಶವನ್ನು ರಕ್ಷಿಸುತ್ತದೆ. ಅಸ್ತಮಾದ ಅಪಾಯ ಕಡಿಮೆ ಮಾಡುತ್ತದೆ. ಯಕೃತ್ ಅನ್ನು ಸ್ವಚ್ಛಗೊಳಿಸುತ್ತದೆ. ಕಣ್ಣಿನ ಆರೋಗ್ಯ ಕಾಪಾಡುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಿ ದೀರ್ಘ ಕಾಲ ನಿಮ್ಮ ಆರೋಗ್ಯದ ರಕ್ಷಣೆ ಮಾಡುತ್ತದೆ.