alex Certify ಪ್ರಕೃತಿ ಸೌಂದರ್ಯದ ಕಡಲು ಮಿಜೋರಾಂನ ರಾಜಧಾನಿ ʼಐಜಾಲ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಕೃತಿ ಸೌಂದರ್ಯದ ಕಡಲು ಮಿಜೋರಾಂನ ರಾಜಧಾನಿ ʼಐಜಾಲ್ʼ

ಭಾರತದ ಈಶಾನ್ಯ ಭಾಗದಲ್ಲಿರುವ ಮಿಜೋರಾಂನ ಐಜಾಲ್​ ಪ್ರದೇಶ ರಾಜ್ಯ ರಾಜಧಾನಿ ಎಂದು ಹೆಸರು ಪಡೆದಿರೋದ್ರ ಜೊತೆಗೆ ತನ್ನ ಪ್ರಕೃತಿ ಸೌಂದರ್ಯದ ಮೂಲಕವೂ ಪ್ರಸಿದ್ಧಿ ಪಡೆದಿದೆ. ಐಜಾಲ್​ನಲ್ಲಿರುವ ತ್ಲಾಂಗ್​ ನದಿ, ದುರ್ತಲಾಂಗ್​ ಶಿಖರ ಸೇರಿದಂತೆ ಇನ್ನೂ ಹಲವು ಪ್ರದೇಶಗಳು ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ.

ಐಜಾಲ್​ನಲ್ಲಿರುವ ಪ್ರವಾಸಿ ತಾಣಗಳು ಒಂದೆರಡಲ್ಲ. ಟಾಮ್​ ಡಿಲ್​ ಸರೋವರದಲ್ಲಿ ನೀವು ದೋಣಿ ವಿಹಾರ ಮಾಡಬಹುದಾಗಿದೆ. ಇದು ಮಾತ್ರವಲ್ಲದ ವಾಂಟಾವಾಂಗ್​ ಜಲಾಪಾತ ಕೂಡ ಪ್ರವಾಸಿಗರ ಫೇವರಿಟ್​ ಸ್ಪಾಟ್​. ಚಿಮ್ಟುಯ್​​ ಪುಯ್​ ನದಿ ಮೀನುಗಾರಿಕೆ ಮಾಡುವವರಿಗೆ ಹೇಳಿ ಮಾಡಿಸಿದ ಸ್ಥಳ. ತ್ಲಾಂಗ್​ ಸರೋವರವನ್ನಂತೂ ನೋಡೋದೇ ಕಣ್ಣಿಗೆ ಪರಮನಾಂದ.

ಇದು ಮಾತ್ರವಲ್ಲದೇ ರಂಗಡಿಲ್​ ಕೆರೆ, ಸೋಲೋಮನ್​ ಮಂದಿರ, ಮಿಜೊರಾಂ ರಾಜ್ಯ ಮ್ಯೂಸಿಯಂ, ರೀಕ್​ಗ್ರಾಮ ಇವೆಲ್ಲವೂ ಪ್ರವಾಸಿಗರ ನೋಡಬಹುದಾದ ಅತ್ಯಾಕರ್ಷಕ ಸ್ಥಳಗಳಾಗಿದೆ.

ಈ ಸ್ಥಳಕ್ಕೆ ಅತೀ ಹತ್ತಿರ ಇರುವ ರೈಲು ನಿಲ್ದಾಣವೆಂದರೆ ಸಿಲ್ಚಾರ್​. ಇದು 184 ಕಿಲೋಮೀಟರ್​ ದೂರದಲ್ಲಿದ್ದು ಇಲ್ಲಿಂದ ಹೆದ್ದಾರಿ ಮೂಲಕ ಐಜಾಲ್​ ಸುಲಭವಾಗಿ ತಲುಪಬಹುದಾಗಿದೆ. ಇದನ್ನ ಹೊರತುಪಡಿಸಿದ್ರೆ ಕೋಲ್ಕತ್ತಾ ಇಲ್ಲವೇ ಗುವಾಹಟಿಯಿಂದ ವಿಮಾನವನ್ನೇರಿ ಈ ನಗರವನ್ನ ತಲುಪಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...